ಮಂಗಳೂರು: ದಕ್ಷಿಣ ಕನ್ನಡದಲ್ಲೂ ಅಕ್ರಮ ಧಾರ್ಮಿಕ ಕಟ್ಟಡ ತೆರವಿಗೆ ಲಿಸ್ಟ್ ತಯಾರು ಮಾಡಲಾಗಿದ್ದು, ಇದರಲ್ಲಿ 667 ದೇವಸ್ಥಾನಗಳು, 186 ಮಸೀದಿಗಳು, 56 ಚರ್ಚ್ ಸೇರಿದೆ ಎಂದು ವರದಿಯಾಗಿದೆ
2009 ರ ಹಿಂದಿನ ಅನಧಿಕೃತ ಕಟ್ಟಡಗಳ ಮಾಹಿತಿ ಪ್ರಕಾರ ಒಟ್ಟು 902 ಅನಧಿಕೃತ ಧಾರ್ಮಿಕ ಕಟ್ಟಡಗಳು ತೆರವಿಗೆ ಲಿಸ್ಟ್ ತಯಾರು ಮಾಡಲಾಗಿದೆ. ಇದರಲ್ಲಿ ದೇವಸ್ಥಾನಗಳು 667,ಮಸೀದಿಗಳು 186,ಚರ್ಚ್ 56, ಇತರೆ ಧಾರ್ಮಿಕ ಕಟ್ಟಡಗಳು 11 ಇವೆ ಎನ್ನಲಾಗಿದೆ.
ಮಂಗಳೂರಿನ ಶಕ್ತಿನಗರದಲ್ಲಿರುವ 700 ವರ್ಷಗಳ ಹಿಂದಿನ ಶ್ರೀ ವೈದ್ಯನಾಥ ದೈವಸ್ಥಾನವನ್ನೂ ತೆರವುಗೊಳಿಸಲು ಜಿಲ್ಲಾಡಳಿತ ಸಜ್ಜಾಗಿದೆ. ಆದರೆ ಆಡಳಿತ ಮಂಡಳಿಗೆ ಇನ್ನೂ ಮಾಹಿತಿ ಇಲ್ಲ ಎಂದು ತಿಳಿದುಬಂದಿದೆ.
920 ಕಟ್ಟಡಗಳು ತೆರವುಗೊಳಿಸಲು ಬಾಕಿ ಇದ್ದು, ಇದರಲ್ಲಿ ಸುಮಾರು 400 ಕಟ್ಟಡಗಳು ಅಧಿಕೃತ ಲಿಸ್ಟ್ ಗೆ ಬರುವ ಸಾದ್ಯತೆ ಇದೆ. 2009 ರ ಈಚೆಗೆ ನಿರ್ಮಾಣಗೊಂಡ ಕಟ್ಟಡಗಳ ಬಗ್ಗೆ ಸರ್ವೆ ಮುಂದುವರಿದಿದ್ದು, ಈ ಬಗ್ಗೆ ಜಿಲ್ಲಾಡಳಿತ ಮಾಹಿತಿ ಪಡೆಯುತ್ತಿದೆ.