ಮಂಗಳೂರು: ಬಡ್ಡ ಅಸೋಸಿಯೇಷನ್ ಜೋಕಟ್ಟೆ ಇದರ ಕುಟುಂಬ ಸಮ್ಮಿಲನವು ಇತ್ತೀಚೆಗೆ ಅಂಗರಗುಂಡಿಯ ಅಡ್ಕ ಹಾಲ್ ನಲ್ಲಿ ಅದ್ಧೂರಿಯಾಗಿ ನಡೆಯಿತು.
ಇದೇ ವೇಳೇ 2021-22 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಟಿ .ಎನ್ .ಬಾವಕ, ಎಚ್.ಪಿ.ಸಿ.ಲ್ ಉಪಾಧ್ಯಕ್ಷರಾಗಿ ಅಮೀರ್ ಬಾವಾಜಿ ಮತ್ತು ಅಮೀರ್ ಕಾಶಿ ಹಾಗೂ ಮೊನು ಆತ್ರಡಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಮುಸ್ತಾಕ್, ಜೊತೆ ಕಾರ್ಯದರ್ಶಿಗಳಾಗಿ ಬಶೀರ್ ಮತ್ತು ಇಬ್ರಾಹಿಮ್ ನಿಸಾರ್, ಖಜಾಂಚಿಯಾಗಿ ರಶೀದ್ ಬಾವಾಜಿ ಆಯ್ಕೆಯಾದರು.ಸಲಹೆಗಾರರಾಗಿ ಬಶೀರ್ ಸುರಲ್ಪಾಡಿ ಮತ್ತು ಆಸಿಫ್ ಪೊಡಿಯಾಜಿ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಹಿದಾಯತ್ , ಹುಸನ್ ಹಾಗೂ ಮುಝಮ್ಮಿಲ್ ಅರ್ಸದ್ (ಅಚ್ಚು) ಅಫೀಲ್ ಆಯ್ಕೆಯಾದರು.
ಗಲ್ಫ್ ಸಮಿತಿ ಸದಸ್ಯರಾಗಿ ಅಮೀರ್ ಅಂಗರಗುಂಡಿ ಪುತ್ತ ಅರಿಕೆರೆ, ಮತ್ತು ನಾಸೀರ್, ರಿಯಾಝ್ ಹಾಗೂ ನೌಫಾಲ್, ಸಫ್ವಾನ್ ಇಮ್ರಾನ್ ತೌಫೀಕ್ ಹಾಗೂ ಆಸ್ಪತ್ರೆಯ ಉಸ್ತುವಾರಿಗಳಾಗಿ ಡಾ.ನಿಸಾರ್. ಮತ್ತು ಹಕೀಮ್ ಹಾಗು ಅಸ್ಗರ್ ಅವರನ್ನು ನೇಮಿಸಲಾಯಿತು.