ದೆಹಲಿ : ವೆಬ್ ಪೋರ್ಟಲ್ಗಳಾದ ನ್ಯೂಸ್ಕ್ಲಿಕ್ ಮತ್ತು ನ್ಯೂಸ್ಲಾಂಡ್ರಿ ಕಚೇರಿಗೆ ಶುಕ್ರವಾದಂದು ಆದಾಯ ತೆರಿಗೆ ಅಧಿಕಾರಿಗಳು ಭೇಟಿ ನೀಡಿ, ಕಾರ್ಯಾಚರಣೆ ನಡೆಸಿದ್ದಾರೆ. ಅಧಿಕಾರಿಗಳು ಇದನ್ನು “ಸರ್ವೆ” ಎಂದು ಕರೆದಿದ್ದು, “ದಾಳಿ” ಅಲ್ಲ ಎಂದು ತಿಳಿಸಿದ್ದಾರೆ.
ಈ ಕಾರ್ಯಾಚರಣೆಯು ಕೆಲವು ತೆರಿಗೆ ಪಾವತಿ ವಿವರಗಳನ್ನು ಮತ್ತು ಸಂಸ್ಥೆಗಳಿಂದ ರವಾನೆಯಾದ ಹಣವನ್ನು ಪರಿಶೀಲಿಸುವುದರ ಸಂಬಂಧಿಸಿದ್ದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ಉಲ್ಲೇಖಿಸಿದೆ.ತೆರಿಗೆ ಇಲಾಖೆಯ ಅಧಿಕಾರಿಗಳು ಬೆಳಿಗ್ಗೆ 11.30 ರ ಸುಮಾರಿಗೆ ಬಂದರು ಮತ್ತು ಇನ್ನೂ ಹೊರಟಿಲ್ಲ. ಅಲ್ಲದೆ ಕಚೇರಿಯಲ್ಲಿರುವ ನೌಕರರು ತಮ್ಮ ಸೆಲ್ ಫೋನ್ಗಳನ್ನು ಬಳಸದಂತೆ ಕೇಳಿಕೊಂಡರು” ಎಂದು ನ್ಯೂಸ್ಲಾಂಡ್ರಿ ಉದ್ಯೋಗಿಯೊಬ್ಬರು ತಿಳಿಸಿದ್ದಾರೆ.
ನ್ಯೂಸ್ ಲಾಂಡ್ರಿ ಮಾಧ್ಯಮಗಳು ಮತ್ತು ಅವುಗಳ ಸುದ್ದಿಗಳನ್ನು ವಿಶ್ಲೇಷಿಸುವ ವೆಬ್ಪೋರ್ಟಲ್ ಆಗಿದೆ. ನ್ಯೂಸ್ ಕ್ಲಿಕ್ ಮುಖ್ಯವಾಹಿನಿಯ ಮಾಧ್ಯಮಗಳು ನಿರ್ಲಕ್ಷಿಸುವ ಜನಪರ ಸುದ್ದಿಗಳನ್ನು ಪ್ರಕಟ ಮಾಡುವ ವೆಬ್ ಪೋರ್ಟಲ್ ಆಗಿದೆ. ಎರಡು ಪೋರ್ಟಲ್ಗಳು ಕೂಡಾ ಪ್ರಭುತ್ವದ ಕೆಂಗಣ್ಣಿಗೆ ಗುರಿಯಾಗಿರುವ ಜನಪರ ಸುದ್ದಿ ಸಂಸ್ಥೆಗಳಾಗಿವೆ.