ಉತ್ತರಪ್ರದೇಶ ಮಾಜಿ ಸಚಿವ, ಬಿಜೆಪಿ ನಾಯಕ ಆತ್ಮಾರಾಮ್ ತೋಮರ್ ನಿಗೂಢ ಸಾವು!

Prasthutha|

ಲಕ್ನೋ: ಉತ್ತರಪ್ರದೇಶದ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಆತ್ಮರಾಮ್ ತೋಮರ್ ಅವರು ನಿಗೂಢವಾಗಿ ಸಾವನ್ನಪ್ಪಿದ್ದಾರೆ.

- Advertisement -

ಮಾಜಿ ಸಚಿವರ ಮೃತದೇಹದ ಕುತ್ತಿಗೆಗೆ ಟವಲ್‌ ಸುತ್ತಿರುವುದು ಕಂಡುಬಂದಿದ್ದು, ಅವರ ಫೋನ್ ಮತ್ತು ಕಾರು ನಾಪತ್ತೆಯಾಗಿವೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಕೊಲೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ವಿಧಿವಿಜ್ಞಾನ ತಂಡ ಮತ್ತು ಶ್ವಾನದಳವು ಸ್ಥಳಕ್ಕೆ ಆಗಮಿಸಿದ್ದು, ತೋಮರ್ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇಂದು (ಶುಕ್ರವಾರ) ಬೆಳಿಗ್ಗೆ ತೋಮರ್ ಅವರ ಚಾಲಕ ವಿಜಯ್ ಮನೆಗೆ ಬಂದು ಬೆಲ್ ಮಾಡಿದಾಗ ಬಾಗಿಲು ತೆರೆಯಲಿಲ್ಲ. ನಂತರ ಬಾಗಿಲನ್ನು ಬಲವಂತವಾಗಿ ತೆರೆದು ನೋಡಿದಾಗ ತೋಮರ್ ಮೃತಪಟ್ಟಿರುವುದು ಕಂಡುಬಂದಿದೆ. ಈ ವೇಳೆ ಕುಟುಂಬದ ಸದಸ್ಯರು ಮನೆಯಲ್ಲಿರಲಿಲ್ಲ ಎಂದು ತಿಳಿದುಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.



Join Whatsapp