ಮಂಗಳೂರು: ನಾಳೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯ

Prasthutha|

ಮಂಗಳೂರು: ಫೀಡರ್ ದುರಸ್ತಿ ಸಂಬಂಧ ನಾಳೆ (ಸೆಪ್ಟಂಬರ್ 8) ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಪಾಂಡೇಶ್ವರ ವ್ಯಾಪ್ತಿಯ ಪ್ರದೇಶಗಳಲ್ಲಿ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆವರೆಗೂ, ಕಾವೂರು ಮುಲ್ಲಕಾಡು ಮತ್ತು ಮಾಲೆಮಾರ್ ಫೀಡರ್ ನಿಂದ ಹೊರಡುವ ಪ್ರದೇಶಗಳಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆವರೆಗೆ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ತಿಳಿಸಿದೆ.

- Advertisement -

ಫೀಡರ್ ನಲ್ಲಿ ಜಂಪರ್ ಬದಲಾವಣೆ ಹಾಗೂ ಜಿಓಎಸ್ ದುರಸ್ತಿ ಹಿನ್ನೆಲೆ ನೆಹರೂ ಮೈದಾನದಿಂದ ಹೊರಡುವ ಪಾಂಡೇಶ್ವರ ಫೀಡರ್ ವ್ಯಾಪ್ತಿಯ ಎಬಿ ಶೆಟ್ಟಿ ಸರ್ಕಲ್, ಭಾರತೀಯ ವಿಶ್ವ ವಿದ್ಯಾಭವನ, ಎಸ್ಪಿ ಆಫೀಸ್, ಪಾಂಡೇಶ್ವರ ರಸ್ತೆ, ಪಾಂಡೇಶ್ವರ ನ್ಯೂ ರಸ್ತೆ, ಅಮೃತ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಇನ್ನು ಕಾವೂರು ಉಪಕೇಂದ್ರದ ಮುಲ್ಲಕಾಡು ಹಾಗೂ ಮಾಲೆಮಾರ್ ಫೀಡರ್ ನಿಂದ ಹೊರಡುವ ದೇರೆಬೈಲ್, ಕುಂಟಿಕಾನ, ಕೊಂಚಾಡಿ, ಪ್ರಶಾಂತ ನಗರ, ಎಜೆ ಹಾಸ್ಪಿಟಲ್, ಮುಲ್ಲಕಾಡು, ಮಾಲೆಮಾರ್, ಲೋಹಿತ್ ನಗರ, ಮಾಲಾಡಿ, ಜಲ್ಲಿಗುಡ್ಡೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ನಡೆಯಲಿದೆ.  



Join Whatsapp