ನವದೆಹಲಿ: ಎಲ್ ಪಿಜಿ , ಪೆಟ್ರೋಲ್ ಮತ್ತು ಡೀಸೆಲ್ ಹಾಗೂ ಅಗತ್ಯ ವಸ್ತುಗಳು ನಿರಂತರ ಬೆಲೆ ಏರಿಕೆ ಸೇರಿದಂತೆ ವಿವಿಧ ಸಮಸ್ಯೆಗಳ ವಿರುದ್ಧ ಕಾಂಗ್ರೆಸ್ ದೇಶದೆಲ್ಲೆಡೆ ಚಳುವಳಿಗಳನ್ನು ಹಮ್ಮಿಕೊಂಡಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ರಾಷ್ಟ್ರೀಯ ಸಮಸ್ಯೆಗಳ ಕುರಿತು ಜನ ಜಾಗೃತಿ ಮೂಡಿಸಲು ಮುಂದಾಗಿದ್ದು, ಇದಕ್ಕಾಗಿ ದೇಶಾದ್ಯಂತ ಚಳವಳಿ ನಡೆಸಲು ಸೂಚಿಸಿದ್ದಾರೆ. ಚಳುವಳಿಯ ರೂಪುರೇಷೆ ತಯಾರಿಸಲು ದಿಗ್ವಿಜಯ್ ಸಿಂಗ್ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಪ್ರಿಯಾಂಕಾ ಗಾಂಧಿ ಸೇರಿದಂತೆ ಒಂಬತ್ತು ಮಂದಿ ಸದಸ್ಯರು ಈ ಸಮಿತಿಯಲ್ಲಿದ್ದಾರೆ.
ದಿಗ್ವಿಜಯ್ ಸಿಂಗ್ ಮತ್ತು ಪ್ರಿಯಾಂಕಾ ಗಾಂಧಿಯವರನ್ನು ಹೊರತುಪಡಿಸಿ, ಉತ್ತಮ್ ಕುಮಾರ್ ರೆಡ್ಡಿ, ಮನೀಶ್ ಚತ್ರತ್, ಬಿ.ಕೆ ಹರಿಪ್ರಸಾದ್, ರಿಪುನ್ ಬೋರಾ, ಉದಿತ್ ರಾಜ್, ರಾಗಿಣಿ ನಾಯಕ್ ಮತ್ತು ಜುಬೇರ್ ಖಾನ್ ಅವರು ಸಮಿತಿಯ ಇತರ ಸದಸ್ಯರಾಗಿದ್ದಾರೆ. ಮುಂದಿನ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕಾಂಗ್ರೆಸ್ ಈ ಕಾರ್ಯತಂತ್ರ ರೂಪಿಸಿದೆ.