ಹಿಂದುತ್ವ ಗುಂಪಿನಿಂದ ಹತ್ಯೆ: ಸಂತ್ರಸ್ತ ಮೂರು ಕುಟುಂಬಗಳನ್ನು ಸಂದರ್ಶಿಸಿದ ಎ.ಐ.ಎಲ್.ಸಿ ನಿಯೋಗ

Prasthutha|

ನವದೆಹಲಿ: ಇತ್ತೀಚೆಗೆ ಬಿಹಾರದ ಸಮಸ್ತೀಪುರ ಜಿಲ್ಲೆಯಲ್ಲಿ ಹಿಂದುತ್ವ ಗುಂಪಿನಿಂದ ಹತ್ಯೆಯಾದ ಮೂವರು ವ್ಯಕ್ತಿಗಳ ಕುಟುಂಬಗಳನ್ನು ಅಖಿಲ ಭಾರತೀಯ ವಕೀಲ ಮಂಡಳಿ (ಎ.ಐ.ಎಲ್.ಸಿ) ನಿಯೋಗ ಸಂದರ್ಶಿಸಿ ಸಾಂತ್ವನ ಹೇಳಿದೆ.
ಅಡ್ವಕೇಟ್ ಶರ್ಫುದ್ದೀನ್ ಅಹ್ಮದ್ (ಪ್ರಧಾನ ಕಾರ್ಯದರ್ಶಿ, ಎ.ಐ.ಎಲ್.ಸಿ) ನೇತೃತ್ವದಲ್ಲಿ ನಿಯೋಗ ಈ ಕುಟುಂಬದ ಸ್ಥಿತಿಗತಿಗಳನ್ನು ಅಧ್ಯಯನ ನಡೆಸಲು ಮತ್ತು ವಿಶ್ಲೇಷಣೆ ಮಾಡುವ ಸಲುವಾಗಿ ಈ ಭೇಟಿ ನಡೆಸಿದೆಯೆಂದು ಹೇಳಲಾಗಿದೆ.
ಕೌನ್ಸಿಲ್ ನ ಉಪಾಧ್ಯಕ್ಷ ಸೆವ್ವಿಲಂ ಪರಿತಿ (ತಮಿಳ್ನಾಡು), ಉಪಾಧ್ಯಕ್ಷ ಅಡ್ವಕೇಟ್ ಖ್ವಾಜಾ ಜಾವೀದ್ ಯೂಸುಫ್ (ಪಶ್ಚಿಮ ಬಂಗಾಳ), ಅಡ್ವಕೇಟ್ ಹೈದರ್ ಅಲಿ (ಜಾರ್ಖಂಡ್), ಅಡ್ವಕೇಟ್ ಸಂತೋಷ್ ಜಾಧವ್ (ಮಹಾರಾಷ್ಟ್ರ), ಅಡ್ವಕೇಟ್ ಅಮೀರ್ ಖಾನ್ (ಬಿಹಾರ್), ಅಡ್ವಕೇಟ್ ಫಿರೋಝ್ ಆಲಂ ಅವರು ಈ ನಿಯೋಗದಲ್ಲಿ ಉಪಸ್ಥಿತರಿದ್ದರು.
ನಿತೀಶ್ ಸರ್ಕಾರವು ರೋಗಪೀಡಿತ ಕುಟುಂಬಕ್ಕೆ ಯಾವುದೇ ಬೆಂಬಲ ನೀಡದಿರುವುದು ದುರದೃಷ್ಟಕರ ಎಂದು ಅಡ್ವಕೇಟ್ ಅಹ್ಮದ್ ಹೇಳಿದರು.
ಸಮಸ್ತಿಪುರ ಜಿಲ್ಲೆಯ ಅಧರ್ ಪುರದಲ್ಲಿ ಜೂನ್ 21 ರಂದು ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಹಿಂದುತ್ವ ಗುಂಪು ಹತ್ಯೆ ಮಾಡಿತ್ತು.
ಸರ್ವಾನ್ ಯಾದವ್ ಎಂಬಾತನನ್ನು ಚಹಾ ಕುಡಿಯುತ್ತಿದ್ದ ವೇಳೆ ಅಪರಿಚಿತರು ಗುಂಡು ಹಾರಿಸಿ ಕೊಲೆ ಮಾಡಿದ ಹಿನ್ನೆಲೆಯಲ್ಲಿ ಈ ಕುಕೃತ್ಯ ನಡೆದಿದೆ ಎಂದು ಹೇಳಲಾಗುತ್ತಿದೆ. ಹಸ್ನೈನ್ ಎಂಬಾತ ಪೂರ್ವದ್ವೇಷದ ಹಿನ್ನೆಲೆಯಲ್ಲಿ ಸರ್ವಾನ್ ನನ್ನು ಕೊಲೆ ಮಾಡಿದ್ದಾನೆಂದು ಆರೋಪಿಸಿ ಆಧಾರ್ ಪುರಕ್ಕೆ ನುಗ್ಗಿದ ಹಿಂದುತ್ವದ ಗುಂಪು ಮುಸ್ಲಿಮರ ವಿರುದ್ಧ ಘೋಷಣೆ ಕೂಗಿತ್ತು. ನಂತರದ ನಡೆಸಿದ ಹೇಯ ಕೃತ್ಯದಲ್ಲಿ ಹಸ್ನೈನ್, ಆತನ ಪತ್ನಿಯನ್ನು ನಗ್ನವಾಗಿ ಮೆರವಣಿಗೆ ನಡೆಸಿ ಚಿತ್ರಹಿಂಸೆ ಮೂಲಕ ಕೊಲ್ಲಲಾಯಿತು. ಇದನ್ನು ತಡೆಯಲು ಯತ್ನಿಸಿದ ಹಸ್ನೈನ್ ಸೋದರಳಿಯ ಅನ್ವರ್ ಅವರನ್ನು ಕೂಡ ಕೊಲ್ಲಲಾಯಿತು. ಮಾತ್ರವಲ್ಲದೆ ಮುಸ್ಲಿಮರ 7 ಮನೆಗಳನ್ನು ಲೂಟಿ ಮಾಡಿ ನೆಲಸಮಗೊಳಿಸಲಾಯಿತು. ಈ ಘಟನೆಯಲ್ಲಿ ಹಿರಿಯರು ಸೇರಿದಂತೆ ಹಲವಾರು ಮಂದಿ ಗಾಯಗೊಂಡಿದ್ದರು.
ಮುಸ್ಲಿಮರ ಮೇಲೆ ಅಮಾನುಷ ಕೃತ್ಯವನ್ನು ಖಂಡಿಸಿ ಎಸ್.ಡಿ.ಪಿ.ಐ ಬೃಹತ್ ಪ್ರತಿಭಟನೆ ನಡೆಸಿದ್ದವು.

Join Whatsapp