ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ರನ್ನು ನಾಗ್ಪುರದಲ್ಲಿ ಭೇಟಿಯಾದ ಸುಪ್ರೀಮ್ ಕೋರ್ಟ್ ಮಾಜಿ ಸಿಜೆಐ

Prasthutha|

ಮುಂಬೈ: ಭಾರತದ ಮಾಜಿ ನ್ಯಾಯಮೂರ್ತಿ (ಸಿಜೆಐ) ಎಸ್.ಎ ಬೋಬ್ಡೆ ಅವರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಆರ್.ಎಸ್.ಎಸ್ ನ ಸರಸಂಚಾಲಕ್ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.

ಆರ್.ಎಸ್.ಎಸ್ ಮುಖಂಡರು ಈ ಭೇಟಿಯನ್ನು ಅಲ್ಲಗಳೆದಿದ್ದಾರೆ. ಆದರೆ ವಿಶ್ವಾಸಾರ್ಹ ಮೂಲಗಳು ಈ ಭೇಟಿಯು ಮಂಗಳವಾರ ಸಂಜೆ 4 ರಿಂದ 5 ರ ನಡೆವೆ ಆರೆಸ್ಸೆಸ್ ನಾಗ್ಪುರದ ಪ್ರಧಾನ ಕಚೇರಿಯಲ್ಲಿ ನಡೆದಿದೆ ಎಂದು ತಿಳಿಸಿವೆ.

- Advertisement -

ನ್ಯಾಯಮೂರ್ತಿ ಬೋಬ್ಡೆ ಅವರು ಆರ್ಎಸ್ಎಸ್ ಮುಖ್ಯಸ್ಥರನ್ನು ಸಂಘದ ಪ್ರಧಾನ ಕಚೇರಿಯಲ್ಲಿ ಔಪಚಾರಿಕವಾಗಿ ಭೇಟಿಯಾಗಿದ್ದು ಇದೇ ಮೊದಲು. ಬೋಬ್ಡೆ ಅವರು ಆರ್ ಎಸ್ ಎಸ್ ಸಂಸ್ಥಾಪಕ ಕೆ ಬಿ ಹೆಡ್ಗೆವಾರ್ ಅವರ ಪೂರ್ವಿಕರ ಮನೆಗೆ ಈ ಹಿಂದೆ ಭೇಟಿ ನೀಡಿದ್ದರು.

ನ್ಯಾ.ಬೋಬ್ಡೆ ನಾಗ್ಪುರದವರು ಮತ್ತು ನಗರದಲ್ಲಿ ಹಲವು ವರ್ಷಗಳಿಂದ ಕಾನೂನು ಅಭ್ಯಾಸ ಮಾಡುತ್ತಿದ್ದರು. ಈ ವರ್ಷದ ಆರಂಭದಲ್ಲಿ ಸಿಜೆಐ ಆಗಿ ನಿವೃತ್ತರಾದ ನಂತರ ಅವರು ತಮ್ಮ ಹೆಚ್ಚಿನ ಸಮಯವನ್ನು ನಾಗ್ಪುರ ಮತ್ತು ದೆಹಲಿಯ ನಡುವೆ ಕಳೆಯುತ್ತಿದ್ದಾರೆ.

ಈ ಹಿಂದೆ ನ್ಯಾಯಮೂರ್ತಿಯಾಗಿದ್ದ ರಂಜನ್ ಗೊಗೊಯ್ ಅವರು ನಿವೃತ್ತಿಯ ನಂತರ ರಾಜ್ಯಸಭೆ ನಾಮನಿರ್ದೇಶನಗೊಂಡ ಬೆಳವಣಿಗೆಯು ಸಾಕಷ್ಟು ವಿವಾದ ಸೃಷ್ಟಿಸಿತ್ತು.

- Advertisement -