ಹೈದರಾಬಾದ್: ಮಹಿಳೆಯೊಬ್ಬಳು ತನ್ನ 18 ತಿಂಗಳ ಮಗುವಿನ ಮೇಲೆ ಹಲ್ಲೆ ನಡೆಸಿ, ಮಗುವಿಗೆ ಥಳಿಸುತ್ತಿರುವ ದೃಶ್ಯವನ್ನು ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾಳೆ. ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 22 ವರ್ಷದ ಮಹಿಳೆಯನ್ನು ತುಳಸಿ ಎಂದು ಗುರುತಿಸಲಾಗಿದೆ. ತುಳಸಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದರು.
ಪತಿ ಮತ್ತು ತುಳಸಿ ಪದೆ ಪದೇ ಜಗಳವಾಡುತ್ತಿದ್ದರು. ಈ ಕಾರಣಕ್ಕಾಗಿ ಪತಿ ತುಳಸಿ ಅವರನ್ನು ತೊರೆದರು. ಬಳಿಕ ಆಂಧ್ರ ಪ್ರದೇಶದಲ್ಲಿ ತನ್ನ ಹೆತ್ತವರೊಂದಿಗೆ ವಾಸಿಸಲು ಪ್ರಾರಂಭಿಸಿದರು. ತುಳಸಿಯು ತನ್ನ ಮಗುವನ್ನು ಥಳಿಸುವ ವಿಡಿಯೋವನ್ನು ನೋಡಿದ ಸಂಬಂಧಿಕರು ಪತಿಗೆ ಮಾಹಿತಿ ನೀಡಿದ್ದಾರೆ, ಸದ್ಯ ತುಳಸಿಯನ್ನು ಬಂಧಿಸಲಾಗಿದೆ.