ಫೆಲೆಸ್ತೀನ್ ಮೇಲೆ ಮತ್ತೆ ದಾಳಿ ನಡೆಸಿ ಭೀಕರತೆ ಮೆರೆದ ಇಸ್ರೇಲ್

Prasthutha|

ಜೆರುಸಲೆಮ್: ಇಸ್ರೇಲ್ ವಾಯುಪಡೆ ಭಾನುವಾರ ಮುಂಜಾನೆ ಗಾಝಾದ ಎರಡು ಸ್ಥಳಗಳ ಮೇಲೆ ದಾಳಿ ನಡೆಸಿದೆ ಎಂದು ಫೆಲೆಸ್ತೀನ್ ಸೈನ್ಯ ತಿಳಿಸಿದೆ. ಗಾಝಾದ ಗಡಿಯಲ್ಲಿ ಹಮಾಸ್- ಇಸ್ರೇಲ್ ಗಳ ಮಧ್ಯೆ ಉಂಟಾದ ಉದ್ವಿಗ್ನತೆ ಹಿನ್ನೆಲೆಯಲ್ಲಿ ಇಸ್ರೇಲ್ ಪಡೆ ಫೆಲೆಸ್ತೀನ್ ನ ಮೇಲೆ ವೈಮಾನಿಕ ದಾಳಿ ನಡೆಸಿ ಭೀಕರತೆ ಮೆರೆದಿದೆ ಎಂದು ಹೇಳಲಾಗುತ್ತಿದೆ.

- Advertisement -

ಹಮಾಸ್ ಬಂಡುಕೋರರ ಶಸ್ತ್ರಾಸ್ತ್ರ ತಯಾರಿಕ ಘಟಕ ಮತ್ತು ತರಬೇತಿ ಕೇಂದ್ರವನ್ನು ಗುರಿಯಾಗಿಸಿ ಹಮಾಸ್ ನ ಮಿಲಿಟರಿ ಕಂಪೌಂಡ್ ಮತ್ತು ಜಬಾಲಿಯಾ ಪ್ರವೇಶದ್ವಾರವನ್ನು ಹೊಡೆದುರುಳಿಸಿಲು ಈ ದಾಳಿ ನಡೆಸಲಾಗಿದೆಯೆಂದು ಇಸ್ರೇಲ್ ಸೇನೆ ತಿಳಿಸಿದೆ.

ಹಮಾಸ್ ಬಂಡುಕೋರರು ನಿನ್ನೆ ಇಸ್ರೇಲ್ ನ ವಿರುದ್ಧ ಬೆಂಕಿಯ ಬಲೂನ್ ಗಳನ್ನು ಹಾರಿಸಿ ದಾಳಿ ನಡೆಸಿದ ಕೃತ್ಯಕ್ಕೆ ಪ್ರತಿಕಾರವಾಗಿ ಈ ದಾಳಿ ನಡೆಸಲಾಗಿದೆಯೆಂದು ತನ್ನ ನಡೆಯನ್ನು ಇಸ್ರೇಲ್ ಸಮರ್ಥಿಸಿದೆ. ಇಸ್ರೇಲ್ ಆರೋಪವನ್ನು ನಿರಾಕರಿಸಿರುವ ಹಮಾಸ್ ಬಂಡುಕೋರರ ಪಡೆ ನಮ್ಮ ಕಡೆಯಿಂದ ಯಾವುದೇ ದಾಳಿ ನಡೆದಿಲ್ಲವೆಂದು ತಿಳಿಸಿದೆ.

- Advertisement -

ಶನಿವಾರ ಸಂಜೆ ಫೆಲೆಸ್ತೀನ್ ಸುತ್ತಮುತ್ತಲಿನ ಎಶ್ಕೋಲ್ ಪ್ರದೇಶದಲ್ಲಿ ಕಾಡ್ಗಿಚ್ಚು ನಡೆದಿದ್ದವು ಎಂದು ಇಸ್ರೇಲ್ ಅಗ್ನಿಶಾಮಕ ದಳದಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಭುಗಿಲೆದ್ದು ಹಿಂಸಾತ್ಮಕ ರೂಪತಾಳಿದೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಇದರ ಮಧ್ಯೆ ಇಸ್ರೇಲ್ ಸೇನೆ ಅಶ್ರುವಾಯು ಮತ್ತು ಗ್ರೆನೇಡ್ ಗಳನ್ನು ಉಪಯೋಗಿಸಿ ಫೆಲೆಸ್ತೀನ್ ಜನತೆಯ ದಾಳಿ ನಡೆಸಿ ಭೀಕರತೆ ಮೆರೆದಿದೆ . ಫೆಲೆಸ್ತೀನ್ ಜನತೆ ಗಾಝಾ ಮತ್ತು ಇಸ್ರೇಲ್ ಗಡಿಯಲ್ಲಿ ಟೈರ್ ಗಳನ್ನು ಸುಟ್ಟು ಹಾಕಿದ್ದರು ಮಾಧ್ಯಮಗಳು ವರದಿ ಮಾಡಿದ್ದವು.

ಇಸ್ರೇಲ್- ಫೆಲೆಸ್ತೀನ್ ನಡುವೆ ಉಂಟಾದ ಘರ್ಷಣೆಯಲ್ಲಿ 11 ಫೆಲೆಸ್ತೀನಿಯರು ಗಾಯಗೊಂಡಿದ್ದಾರೆಂದು ಗಾಝಾ ಆರೋಗ್ಯ ಸಚಿವಾಲಯ ತಿಳಿಸಿದೆ. ಮಾತ್ರವಲ್ಲದೆ ಉಭಯ ಗಡಿಯಲ್ಲಿ ಇನ್ನೂ ಉದ್ವಿಗ್ನತೆ ಮುಂದುವರಿದಿದೆಯೆಂದು ಹೇಳಲಾಗುತ್ತಿದೆ.



Join Whatsapp