ಕರ್ನಾಲ್: ಹರ್ಯಾಣದಲ್ಲಿ ರೈತರ ವಿರುದ್ಧ ಮತ್ತೆ ಲಾಠಿ ಬೀಸಲಾಗಿದೆ. ಬಿಜೆಪಿಯ ಸಭೆಯನ್ನು ವಿರೋಧಿಸಿ ಕರ್ನಾಲ್ ಕಡೆಗೆ ಜಾಥಾ ನಡೆಸುತ್ತಿದ್ದ ರೈತರ ಮೇಲೆ ಪೊಲೀಸರು ಯದ್ವಾತದ್ವ ಲಾಠಿ ಚಾರ್ಜ್ ಮಾಡಿದ್ದು, 10ಕ್ಕೂ ಅಧಿಕ ರೈತರು ಗಾಯಗೊಂಡಿದ್ದಾರೆ.
ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ಬಿಜೆಪಿ ರಾಜ್ಯಾಧ್ಯಕ್ಷ ಒ.ಪಿ.ಧನ್ಕರ್ ಅವರು ಬಿಜೆಪಿಯ ರಾಜ್ಯಮಟ್ಟದ ಈ ಸಭೆಯಲ್ಲಿ ಪಾಲ್ಗೊಂಡಿದ್ದರು.
ಬಸ್ತಾರ ಟೋಲ್ ಪ್ಲಾಜಾ ಬಳಿ ಜಮಾವಣೆಗೊಳ್ಳುವಂತೆ ಬಿಕೆಯು ರೈತರಿಗೆ ಕರೆ ನೀಡಿತ್ತು. ಇಲ್ಲಿಗೆ ತೆರಳುತ್ತಿದ್ದ ರೈತರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದರು. ಬಳಿಕ ಆಕ್ರೋಶಗೊಂಡ ರೈತರು ಜಲ್ಮಾನ, ಅಸ್ಸಂಧ, ನಿಸ್ಸಿಂಗ್ ಬಳಿ ರಸ್ತೆ ತಡೆ ನಡೆಸಿದರು.
ಬಸ್ತಾರ ಟೋಲ್ ಪ್ಲಾಜಾ ಬಳಿಕ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಗಾಯಾಳು ರೈತರನ್ನು ಆಸ್ಪತ್ರೆಗಳಿಗೆ ಸೇರಿಸಲಾಗಿದೆ.