ಸಂಜೆಯ ನಂತರ ಓಡಾಟ ನಿಷೇಧ: ಭಾರೀ ಟೀಕೆಯ ಬಳಿಕ ಆದೇಶ ಹಿಂಪಡೆದುಕೊಂಡ ಮೈಸೂರು ವಿವಿ

Prasthutha|

ಮೈಸೂರು: ಮಾನಸಗಂಗೋತ್ರಿ ಆವರಣದಲ್ಲಿ ಸಂಜೆ 6.30ರ ನಂತರ ಯಾರೂ ಓಡಾಡದಂತೆ ನಿಷೇಧ ಹೇರಿ ಹೊರಡಿಸಲಾಗಿದ್ದ ಆದೇಶವನ್ನು ಭಾರೀ ಆಕ್ಷೇಪ ಮತ್ತು ಆಕ್ರೋಶದ ನಂತರ ಮೈಸೂರು ವಿಶ್ವವಿದ್ಯಾಲಯ ಹಿಂಪಡೆದುಕೊಂಡಿದೆ.


ಮೈಸೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆ ನಡೆದ ಅತ್ಯಾಚಾರ ಪ್ರಕರಣದ ಬಳಿಕ ಸುರಕ್ಷತಾ ದೃಷ್ಟಿ ಹಾಗೂ ಮುನ್ನೆಚ್ಚರಿಕೆ ಕ್ರಮವಾಗಿ ಕುಕ್ಕರಹಳ್ಳಿ ಆವರಣಕ್ಕೆ ಸಂಜೆ 6.30ರ ನಂತರ ಯಾರು ಕೂಡ ಪ್ರವೇಶಿಸಬಾರದು ಎಂದು ಕುಲಪತಿ ಪ್ರೊ.ಜಿ.ಹೇಮಂತ್ಕುಮಾರ್ ಆದೇಶದಲ್ಲಿ ತಿಳಿಸಿದ್ದರು.

- Advertisement -


ಮಾನಸಗಂಗೋತ್ರಿಯಲ್ಲೂ ಸಂಜೆ ನಂತರ ವಿದ್ಯಾರ್ಥಿಗಳು ಓಡಾಡದಂತೆ ಆದೇಶದಲ್ಲಿ ತಿಳಿಸಲಾಗಿತ್ತು. ಇದಕ್ಕೆ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ಆಕ್ಷೇಪ, ವಿರೋಧ ವ್ಯಕ್ತವಾಯಿತು. ಇದರಿಂದ ಆದೇಶವನ್ನು ವಿವಿ ಹಿಂಪಡೆದುಕೊಂಡಿದೆ.

- Advertisement -