ಕಾಬೂಲ್ ಅವಳಿ ಸ್ಫೋಟದಿಂದಾಗಿ ಪಾಕಿಸ್ತಾನ ಆತಂಕದಲ್ಲಿದೆ : ಪಾಕ್ ಪ್ರಧಾನಿ ಇಮ್ರಾನ್ ಖಾನ್

Prasthutha|

ನವದೆಹಲಿ: ಹಣಕಾಸು ಕ್ರಿಯಾ ಕಾರ್ಯಯೋಜನೆ ಪಡೆ (ಎಫ್.ಎ.ಟಿ.ಎಫ್) ಪಟ್ಟಿಯಿಂದ ಹೊರಬರಲು ಸಾಧ್ಯವಾಗದೆ ಒತ್ತಡದಲ್ಲಿರುವ ಪಾಕಿಸ್ತಾನಕ್ಕೆ ಕಾಬೂಲ್ ನಲ್ಲಿ ಐಸಿಸ್ ನಡೆಸಿರುವ ಅವಳಿ ಬಾಂಬ್ ಸ್ಫೋಟವು ಪಾಕಿಸ್ತಾನವನ್ನು ಆತಂಕಕ್ಕೆ ತಳ್ಳಿದೆಯೆಂದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದಾರೆ.

- Advertisement -

ಇತ್ತೀಚೆಗೆ ಕಾಬೂಲ್ ನಲ್ಲಿ ಐಸಿಸ್ ಆಯೋಜಿಸಿದ ಅವಳಿ ಬಾಂಬ್ ಸ್ಫೋಟದಲ್ಲಿ ಕನಿಷ್ಠ 100 ಮಂದಿ ಹತರಾಗಿ, ಅನೇಕರು ಗಾಯಗೊಂಡಿದ್ದರು.

ಅಮೆರಿಕ ಸೈನ್ಯವನ್ನು ಭಾಗಶಃ ಹಿಂತೆಗೆದುಕೊಂಡ ನಂತರ ಇಸ್ಲಾಮಾಬಾದ್ ಮೂಲದ ತಾಲಿಬಾನ್ ಅಫ್ಘಾನಿಸ್ತಾನವನ್ನು ತಮ್ಮ ವಶಕ್ಕೆ ಪಡೆದ ನಂತರ ವಿಜಯೋತ್ಸವ ಆಚರಿಸಿತ್ತು. ಆದರೆ ಈ ದಾಳಿಯು ಮೂಲಕ ಭಯೋತ್ದಾದಕ ಸಂಘಟನೆಗಳೊಂದಿಗೆ ನೇರ ಸಂಪರ್ಕದ ಸಾಧ್ಯತೆಯಿರುವುದರಿಂದ ಪಾಕಿಸ್ತಾನ ಮತ್ತೊಮ್ಮೆ ಆತಂಕಕ್ಕೊಳಗಾಗಿದೆ ಎಂದು ಅವರು ತಿಳಿಸಿದರು.

- Advertisement -

ಪಾಕಿಸ್ತಾನ ಮೂಲದ ತಬದ್ಲಾಬ್ ಎಂಬ ಸಂಸ್ಥೆಯು ಎಫ್.ಎ.ಟಿ.ಎಫ್. ನಲ್ಲಿ 2008 – 2019 ರ ನಡುವೆ ಪಾಕಿಸ್ತಾನ ಸರಿಸುಮಾರು 38 ಬಿಲಿಯನ್ ಡಾಲರ್ ನಷ್ಟು ಮೊತ್ತವನ್ನು ಹೂಡಿಕೆ ಮಾಡಿದೆಯೆಂದು ಅಂದಾಜಿಸಲಾಗಿದೆ. ಈ ಹಣಕಾಸು ಪಟ್ಟಿಯಿಂದ ಹೊರಬರಲು ಪಾಕಿಸ್ತಾನವು ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ. ಈ ಸಲ ತಾಲಿಬಾನ್ ವಿಭಿನ್ನ ಅವತಾರವನ್ನು ತಾಳಿದೆಯೆಂದು ಹೇಳಲಾಗುತ್ತಿದೆ ಎಂದು ಅವರು ಈ ಸಂದರ್ಭದಲ್ಲಿ ತಿಳಿಸಿದರು.

ಇಂಡಿಯಾ ರೈಟ್ಸ್ ನೆಟ್ವರ್ಕ್ ಆಯೋಜಿಸಿದ ವೆಬ್ನಾರ್ ನಲ್ಲಿ ಮಾತನಾಡಿದ ಪಾಕಿಸ್ತಾನದಲ್ಲಿನ ಭಾರತೀಯ ಹೈ ಕಮಿಷನರ್ ಟಿಸಿಎ ರಾಘವನ್ ಅಫ್ಘಾನಿಸ್ತಾನದಲ್ಲಿ ಅಮೆರಿಕ ಅನುಭವಿಸಿದ ವೈಫಲ್ಯದಿಂದಾಗಿ ತಾಲಿಬಾನ್ ಮತ್ತೆ ಅಧಿಕಾರವನ್ನು ಪಡೆಯಲು ಯಶಸ್ವಿಯಾಗಿದೆ ಎಂದು ದೂರಿದರು .



Join Whatsapp