ಮಂಗಳೂರು ಬೀದಿ ಬದಿ ವ್ಯಾಪಾರಿಗಳ ಬಲವಂತದ ತೆರವು | ಲಾರಿ ಎದುರು ಮಲಗಿ ಪ್ರತಿಭಟನೆ

Prasthutha|

ಮಂಗಳೂರು : ಮಂಗಳೂರಿನ ಸೆಂಟ್ರಲ್ ಮಾರ್ಕೆಟ್ ಬಳಿ ಬೀದಿ ಬದಿ ವ್ಯಾಪಾರಿಗಳನ್ನು ಮಂಗಳೂರು ಮಹಾ ನಗರ ಪಾಲಿಕೆ ಅಧಿಕಾರಿಗಳು ಬಲವಂತವಾಗಿ ತೆರವುಗೊಳಿಸಿದ್ದಾರೆ.

- Advertisement -

ಇತ್ತೀಚ್ಚೆಗಷ್ಟೆ ಇಲ್ಲಿನ ಸೆಂಟ್ರಲ್ ಮಾರ್ಕೆಟ್ ಕಟ್ಟಡವನ್ನು ಧ್ವಂಸಗೊಳಿಸಿ ನಗರದ ಹೊರ ವಲಯದಲ್ಲಿ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಕೆಲವು ಬೀದಿ ಬದಿ ವ್ಯಾಪಾರಿಗಳು ಸೆಂಟ್ರಲ್ ಮಾರ್ಕೆಟ್ ಸುತ್ತಮುತ್ತ ತಳ್ಳುಗಾಡಿಗಳಲ್ಲಿ ಮತ್ತು ರಸ್ತೆ ಬದಿಗಳಲ್ಲಿ ವ್ಯಾಪಾರ ಮಾಡುತ್ತಿರುವುದನ್ನು ಮನಪಾ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ತೆರವುಗೊಳಿಸಿದ್ದಾರೆ.

ಈ ಬಗ್ಗೆ ನೂರಾರು ಬಡ ಬೀದಿ ಬದಿ ವ್ಯಾಪಾರಸ್ಥರು ಮನಪಾ ಅಧಿಕಾರಿಗಳ ವಿರುದ್ಧ ಪ್ರತಿಭಟಿಸಿದ್ದಾರೆ. ಕಾರ್ಯಾಚರಣೆಗೆ ಬಂದ್ದಿದ್ದ ಲಾರಿ ಎದುರು ಮಲಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಇನ್ನು ಬೀದಿ ಬದಿ ವ್ಯಾಪಾರಸ್ಥರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಿದರು.

Join Whatsapp