ಛತ್ತೀಸ್ ಗಡ: ತನ್ನ ಪತ್ನಿಯೊಂದಿಗೆ ಬಲವಂತದ ಲೈಂಗಿಕ ಚಟುವಟಿಕೆಯನ್ನು ಅತ್ಯಾಚಾರವೆಂದು ಪರಿಗಣಿಸಲಾಗುವುದಿಲ್ಲವೆಂದು ಛತ್ತೀಸ್ ಗಡ ನ್ಯಾಯಾಲಯ ಗುರುವಾರ ಸ್ಪಷ್ಟಪಡಿಸಿದೆ. ಮಹಿಳೆಯೊಬ್ಬಳು ತನ್ನ ಪತಿಯ ವಿರುದ್ಧ ಸಲ್ಲಿಸಿದ್ದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತೀರ್ಪನ್ನು ನೀಡಿ ಆತನನ್ನು ಬಿಡುಗಡೆಗೆ ಆದೇಶಿಸಿದೆ.
ಮಹಿಳೆಯೊಬ್ಬಳು ನೀಡಿದ ದೂರಿನ ಆಧಾರದಲ್ಲಿ ಪತಿಯ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣದ ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಆತನ ವಿರುದ್ಧ ಐಪಿಸಿ ಸೆಕ್ಷನ್ 376, 377, 498 ಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಎನ್.ಕೆ ಚಂದ್ರವಂಶಿ ಅವರು ಹೈದಿನೈದು ವರ್ಷಕ್ಕಿಂತ ಮೇಲ್ಪಟ್ಟ ಸ್ವಂತ ಪತ್ನಿಯೊಂದಿಗೆ ನಡೆಸುವ ದೈಹಿಕ ಸಂಪರ್ಕ ಭಾರತೀಯ ಕಾನೂನಿನ್ವಯ ಅತ್ಯಾಚಾರವಲ್ಲವೆಂದು ಹೇಳಿದರು. ಮಾತ್ರವಲ್ಲದೆ ಐಪಿಸಿ ಸೆಕ್ಷನ್ 375 ರ ಅಡಿಯಲ್ಲಿ ಪತಿಗೆ ವಿನಾಯಿತಿ ನೀಡಲಾಗಿದೆಯೆಂದು ಆದೇಶಿಸಿದರು. ಕಾನೂನುಬದ್ದವಾಗಿ ಮದುವೆಯಾದ ಪತಿ ತನ್ನ ಪತ್ನಿಯೊಂದಿಗೆ ಬಲವಂತ, ಆಕೆಯ ಇಚ್ಛೆಗೆ ವಿರುದ್ಧ ನಡೆಸುವ ದೈಹಿಕ ಸಂಪರ್ಕ ಅತ್ಯಾಚಾರದ ಅಪರಾಧವಾಗುವುದಿಲ್ಲ ಎಂದು ಅವರು ತಿಳಿಸಿದರು.