ಯತ್ನಾಳ್ ಕೊಠಡಿಯ ಬಾಗಿಲಿಗೆ ಬಿನ್ ಲಾಡೆನ್ ಮುಖ ಹೋಲುವ ಭಿತ್ತಿಪತ್ರ ಅಂಟಿಸಿದ ಕಾಂಗ್ರೆಸ್ ಕಾರ್ಯಕರ್ತನ ಬಂಧನ

Prasthutha|

ಬೆಂಗಳೂರು: ಶಾಸಕರ ಭವನದಲ್ಲಿರುವ ಬಸನಗೌಡ ಪಾಟೀಲ್ ಯತ್ನಾಳ್ ಕೊಠಡಿಯ ಬಾಗಿಲಿಗೆ ಬಿನ್ ಲಾಡೆನ್ ಮುಖ ಹೋಲುವ ಭಿತ್ತಿಪತ್ರ ಅಂಟಿಸುವ ಮೂಲಕ ಪ್ರತಿಭಟಿಸಿದ್ದ ಕಾಂಗ್ರೆಸ್ ಕಾರ್ಯಕರ್ತ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -


ಕಾಂಗ್ರೆಸ್ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ನೀಡಿದ್ದ ಹೇಳಿಕೆಯನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಈ ಭಿತ್ತಿಪತ್ರವನ್ನು ಅಂಟಿಸಿದ್ದರು.


ಶಾಸಕರ ಭವನದಲ್ಲಿರುವ ಯತ್ನಾಳ್ ಕೊಠಡಿಗೆ ಸೋಮವಾರ ಬಿನ್ ಲಾದೆನ್ ಮುಖ ಹೋಲುವ ಯತ್ನಾಳ್ ಭಾವಚಿತ್ರವಿರುವ ಭಿತ್ತಿಪತ್ರ ಅಂಟಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಈ ಕುರಿತು ವೀಡಿಯೋವನ್ನು ಕಾಂಗ್ರೆಸ್ ಅಧಿಕೃತ ಗ್ರೂಪ್ ನಲ್ಲಿ ಮಾಧ್ಯಮಗಳಿಗೆ ಹಂಚಿಕೆ ಮಾಡಲಾಗಿತ್ತು. ಇಂದು ಪೊಲೀಸರು ಕಾಂಗ್ರೆಸ್ ಕಾರ್ಯಕರ್ತ ಚೆಲುವರಾಜು ಎಂಬಾತನನ್ನು ಬಂಧಿಸಿ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.



Join Whatsapp