ನವದೆಹಲಿ: ಜಮ್ಮು ಕಾಶ್ಮೀರದ ಎರಡು ಹುರಿಯತ್ ಗುಂಪುಗಳನ್ನು ನಿಷೇಧಿಸುವ ಉದ್ದೇಶ ಸದ್ಯಕ್ಕಂತೂ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಮೊನ್ನೆ ಎಲ್ಲ ಮಾಧ್ಯಮಗಳಲ್ಲಿ ಹುರಿಯತ್ ಗುಂಪುಗಳ ನಿಷೇಧದ ಬಗೆಗೆ ಸುದ್ದಿ ಬಂದುದರಿಂದ ಸರಕಾರ ಈ ಸ್ಪಷ್ಟೀಕರಣ ನೀಡಿದೆ.
ಯುಎಪಿಎ- ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಹುರಿಯತ್ ಗುಂಪುಗಳನ್ನು ನಿಷೇಧಿಸುವ ಸುದ್ದಿ ಬಂದಿತ್ತು. ಅಂಥ ಆಲೋಚನೆ ಇಲ್ಲ ಎಂದು ಸುತ್ತೋಲೆ ಹೊರಡಿಸಿರುವ ಒಕ್ಕೂಟ ಸರಕಾರವು ಆ ಕಾಯ್ದೆಯಡಿ ಬಂಧಿತ ಹುರಿಯತ್ ಗಳನ್ನು ಕಾನೂನು ಪ್ರಕಾರ ಶಿಕ್ಷಿಸಲಾಗುವುದು ಎಂದು ಹೇಳಿದೆ.
ಜೆಕೆಎಲ್ಎಫ್-ಜಮ್ಮು ಕಾಶ್ಮೀರ್ ಲಿಬರೇಶನ್ ಫ್ರಂಟ್ ನಿಷೇಧಿಸಲು ಪ್ರಧಾನಿ ಮೋದಿ ನೇತೃತ್ವದಲ್ಲಿ ಸಂಪುಟ ಸಭೆಯು ಎರಡು ವರ್ಷಗಳ ಹಿಂದೆ ತೀರ್ಮಾನ ತೆಗೆದುಕೊಂಡುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.