ಅಫ್ಘಾನಿಸ್ತಾನದ ನೆರೆಹೊರೆಯ ಗಡಿಗಳನ್ನು ತೆರೆಯಲು ವಿಶ್ವಸಂಸ್ಥೆ ಆಗ್ರಹ

Prasthutha|

ಕಾಬೂಲ್: ಅಫ್ಘಾನಿಸ್ತಾನದ ಕಾಬೂಲ್ ವಿಮಾನ ನಿಲ್ದಾಣದಿಂದ ಅಮೆರಿಕ ಸುಮಾರು 3,000 ಜನರನ್ನು ಸ್ಥಳಾಂತರಿಸಿದೆ ಎಂದು ಶ್ವೇತಭವನದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆಗಸ್ಟ್ 14 ರಿಂದ ಒಟ್ಟು 9000 ಮಂದಿಯನ್ನು ಈಗಾಗಲೇ ಸ್ಥಳಾಂತರಿಸಿದೆ ಎಂದು ಹೇಳಲಾಗುತ್ತಿದೆ.

- Advertisement -

ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (UNHCR) ನ ವಕ್ತಾರರಾದ ಶಾಬಿಯಾ ಮಂಟೂ ಅವರು ದ್ವಿಪಕ್ಷೀಯ ಕಾರ್ಯಕ್ರಮಗಳ ಮೂಲಕ ಅಫ್ಘಾನ್ ಪ್ರಜೆಗಳನ್ನು ಸ್ಥಳಾಂತರಿಸುವುದನ್ನು ಸ್ವಾಗತಿಸಿದ್ದಾರೆ. ಆದರೆ ಅವರು ತುರ್ತು ಮತ್ತು ವಿಶಾಲವಾದ ಅಂತಾರಾಷ್ಟ್ರೀಯ ಮಾನವೀಯ ಪ್ರತಿಕ್ರಿಯೆಯನ್ನು ಬದಲಾಯಿಸಬಾರದೆಂದು ಒತ್ತಿ ಹೇಳಿದರು.

ಮಾತ್ರವಲ್ಲದೆ ನಿಯಮಿತ ಮಾರ್ಗಗಳ ಮೂಲಕ ಅಫ್ಘಾನ್ ನಾಗರಿಕರಿಗೆ ದೇಶವನ್ನು ತೊರೆಯಲು ಸಾಧ್ಯವಾಗುತ್ತಿಲ್ಲವೆಂದು ಅವರು ಜಿನೀವಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಅಪಾಯದಲ್ಲಿರುವವರಿಗೆ ಯಾವುದೇ ಸ್ಪಷ್ಟವಾದ ಮಾರ್ಗವಿಲ್ಲವೆಂದು ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಪ್ರಸಕ್ತ ರಾಜಕೀಯ ಬಿಕ್ಕಟ್ಟನ್ನು ಬಗೆಹರಿಸುವವರೆಗೆ ನೆರೆಯ ರಾಷ್ಟ್ರಗಳು ತಮ್ಮ ಗಡಿಯನ್ನು ತೆರೆದಿಡಲು ವಿಶ್ವಸಂಸ್ಥೆ ಸೂಚಿಸಿದೆ.



Join Whatsapp