ನಿರ್ಮಾಣ ಹಂತದಲ್ಲೇ ಕುಸಿದು ಬಿದ್ದ ‘ನಮೋ’ ಕಾಲೇಜ್|ಬ್ರಾಂಡ್ ನೇಮ್ ಎಫೆಕ್ಟ್ ಎಂದ IAS ಅಧಿಕಾರಿ

Prasthutha|

ಗುಜರಾತ್ : ಗುಜರಾತ್‌ ಬಳಿಯ ಕೇಂದ್ರಾಡಳಿತ ಪ್ರದೇಶವಾದ ದಾನಾದ ಸಿಲ್ವಾಸಾದಲ್ಲಿ 139 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ‘ನಮೋ’ ವೈದ್ಯಕೀಯ ಕಾಲೇಜಿನ ಮೇಲ್ಚಾವಣಿ ನಿಮಾರ್ಣ ಹಂತದಲ್ಲೆ ಕುಸಿದು ಬಿದ್ದಿದೆ. ಇದನ್ನು ಪ್ರಧಾನಿ ಮೋದಿಗೆ ಟ್ವಿಟರ್‌ನಲ್ಲಿ ಟ್ಯಾಗ್ ಮಾಡಿರುವ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್ ಗೋಪಿನಾಥ್‌, ‘ಇದು ಮುಂಬರುವ ದಿನಗಳ ಚಿತ್ರಣವೇ’ ಎಂದು ಪ್ರಶ್ನಿಸಿದ್ದಾರೆ.
ಘಟನೆ ವರದಿಯಾದ ತಕ್ಷಣ ದಾನ ಆಡಳಿತ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯ ಅವಲೋಕನ ನಡೆಸಿದ್ದಾರೆ. ಆದರೆ ಈ ಸಮಯದಲ್ಲಿ ಸ್ಥಳದಲ್ಲೆ ಅವರು ಯಾವುದೇ ಮಾಹಿತಿಯನ್ನು ನೀಡಿಲ್ಲ .

- Advertisement -

ಘಟನೆ ಬಗ್ಗೆ ಟ್ವಿಟರ್‌ನಲ್ಲಿ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್ ಗೋಪಿನಾಥ್‌ ಪ್ರಧಾನಿ ಮೋದಿಯನ್ನು ಪ್ರಶ್ನಿಸಿದ್ದಾರೆ. ಅವರು ತಮ್ಮ ಟ್ವೀಟ್‌ನಲ್ಲಿ, “ಆತ್ಮೀಯ ಪ್ರಧಾನಿ ನರೇಂದ್ರ ಮೋದಿಯವರೆ, ಸಿಲ್ವಾಸಾದಿಂದ ಸಂಕಷ್ಟಕರ ಸುದ್ದಿ ಬರುತ್ತಿದೆ. ನಿರ್ಮಾಣ ಹಂತದಲ್ಲಿರುವ ‘ನಮೋ’ ವೈದ್ಯಕೀಯ ಕಾಲೇಜಿನ ಮುಂಭಾಗ ಕುಸಿದು ಬಿದ್ದಿದೆ. ಇದು ಮುಂಬರುವ ದಿನಗಳ ಚಿತ್ರಣವೇ? ಅಥವಾ ನಿಮ್ಮ ಬ್ರ್ಯಾಂಡ್ ಅನ್ನು ವ್ಯಾಖ್ಯಾನಿಸುವ ಅಗ್ಗದ ವಸ್ತುಗಳ ಸಂಕೇತವೇ?” ಎಂದು ಚಿತ್ರದ ಸಮೇತ ಟ್ವೀಟ್ ಮಾಡಿದ್ದಾರೆ.

Join Whatsapp