ತುಳುವೆರ್ ಕುಡ್ಲ ಸಂಘಟನೆಯ ಲಾಂಛನ ಬಿಡುಗಡೆ ಮಾಡಿದ ಸಿಎಂ ಬೊಮ್ಮಾಯಿ

Prasthutha|

ಬೆಂಗಳೂರು: ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಗುರುವಾರ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ತುಳುವೆರ್ ಕುಡ್ಲ (ರಿ). ನೂತನ ಸಂಘಟನೆಯ “ಲೊಗೊ”ವನ್ನು ಬಿಡುಗಡೆ ಮಾಡಿದರು.

- Advertisement -


ತುಳು ಭಾಷೆಯನ್ನು ಕರ್ನಾಟಕ ರಾಜ್ಯದ ಅಧಿಕೃತ ರಾಜ್ಯಭಾಷೆಯನ್ನಾಗಿ ಘೋಷಣೆ ಮಾಡುವಂತೆ ಮನವಿ ಸಲ್ಲಿಸಲಾಯಿತು ಹಾಗೂ “ತುಳು ಕೆಳಿಂಜ ಭಾರತ” ಎನ್ನುವ ತುಳುನಾಡಿಗೆ ಸಂಬಂಧಪಟ್ಟ ಪುಸ್ತಕವನ್ನು ಕೊಟ್ಟು ಮುಖ್ಯಮಂತ್ರಿಗಳನ್ನು ಸನ್ಮಾನಿಸಲಾಯಿತು.


ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಡಿ ವೇದವ್ಯಾಸ ಕಾಮತ್ ಹಾಗೂ ಮುಲ್ಕಿ-ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್, ತುಳುವೆರ್ ಕುಡ್ಲ ಸಂಘಟನೆಯ ಅಧ್ಯಕ್ಷ ಪ್ರತೀಕ್ ಯು ಪೂಜಾರಿ, ಕೋಶಾಧಿಕಾರಿ ಚರಿತ್ ಪೂಜಾರಿ, ಕಾರ್ಯದರ್ಶಿ ಪ್ರತೀಕ್ ರಾವ್, ಸಂಘಟನಾ ಸಂಚಾಲಕ ರೋಶನ್ ರೇನೊಲ್ಡ್, ಸಹ ಸಂಚಾಲಕ ಕುಷಿತ್, ವರುಣ್ ಆಚಾರ್ಯ ಉಪಸ್ಥಿತರಿದ್ದರು.



Join Whatsapp