ಟೀಕೆಯ ಬಳಿಕ ದೇವಾಲಯದಿಂದ ಮೋದಿ ಮೂರ್ತಿ ಹೊರಕ್ಕೆ; ಹರಕೆ ತೀರಿಸಲು ಆಗಲಿಲ್ಲ ಎಂದು ವ್ಯಂಗ್ಯವಾಡಿದ ಎನ್ ಸಿಪಿ

Prasthutha|

ಮುಂಬೈ: ಪುಣೆಯ ಔಂದ್ ನ ದೇವಾಲಯದಲ್ಲಿ ಇಡಲಾಗಿದ್ದ ಪ್ರಧಾನಿ ಮೋದಿಯವರ ಎದೆ ಮಟ್ಟದ ಪ್ರತಿಮೆಯನ್ನು ತೀವ್ರ ಟೀಕೆಯ ಬಳಿಕ ಅಲ್ಲಿಂದ ತೆಗೆದು ಹಾಕಲಾಗಿದೆ. ಬಿಜೆಪಿ ಕಾರ್ಯಕರ್ತನೊಬ್ಬ ಈ ಪ್ರತಿಮೆಯನ್ನು ಇಟ್ಟಿದ್ದ. ಭಾರೀ ಟೀಕೆಯ ಬಳಿಕ ತೆಗೆದು ಹಾಕಲಾಗಿದೆ. ಎನ್ ಸಿಪಿ- ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ ಮಾತ್ರ ಇದನ್ನು ಗೇಲಿ ಮಾಡಿದೆ.

- Advertisement -


ಪೆಟ್ರೋಲಿಯಂ ಬೆಲೆ ಏರಿಸಿದ ಮೋದಿ ಮೂರ್ತಿಗೆ ನಾವು ಪೆಟ್ರೋಲ್, ಅಡುಗೆ ಅನಿಲ ಅರ್ಪಿಸಬೇಕು ಎಂದಿದ್ದೆವು. ಅಷ್ಟರೊಳಗೆ ತೆಗೆದು ಬಿಟ್ಟಿದ್ದಾರೆ, ಛೇ ಛೇ ಎಂದು ಎನ್ ಸಿಪಿ ವ್ಯಂಗ್ಯವಾಡಿದೆ.


ನಾವು ಯುವಕರಿಗೆ ಉದ್ಯೋಗಾವಕಾಶ ಮಾಡಿಕೊಡಪ್ಪ ಎಂದು ಮೋದಿ ಮೂರ್ತಿಗೆ ಪ್ರಾರ್ಥಿಸಿದ್ದೆವು, ಏನೂ ಆಗಿಲ್ಲ ಎಂದು ಎನ್ ಸಿಪಿ ನಾಯಕ ಪ್ರಶಾಂತ್ ಜಗತಾಪ್ ಹೇಳಿದ್ದಾರೆ. ಮಯೂರ್ ಮುಂಡೆ ಎಂಬ ಬಿಜೆಪಿ ಕಾರ್ಯಕರ್ತ, ನಾನು ಮೋದಿಯನ್ನು ಆರಾಧಿಸುತ್ತೇನೆ ಎಂದು ಹೇಳಿ ಅವರ ಪ್ರತಿಮೆ ತಂದು ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ.



Join Whatsapp