ಅಫ್ಘಾನ್ ನಿಂದ ಡ್ರೈ ಫ್ರೂಟ್ಸ್ ಆಮದು ಸ್ಥಗಿತ: ಬಾದಾಮಿ, ಪಿಸ್ತಾ, ಅಂಜೂರದ ಬೆಲೆ ಏರಿಕೆ

Prasthutha|

ನವದೆಹಲಿ: ಅಫ್ಘಾನ್ ದೇಶದ ಆಂತರಿಕ ಕಲಹದಿಂದಾಗಿ ನೆರೆಯ ದೇಶಗಳ ವ್ಯಾಪಾರ ವಹಿವಾಟಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಅಫ್ಘಾನ್ ನಿಂದ ಭಾರತಕ್ಕೆ ಆಮದಾಗುತ್ತಿದ್ದ ಒಣ ಹಣ್ಣುಗಳ ಬೆಲೆ ವಿಪರೀತ ಏರಿಕೆಯಾಗಿದೆ.

- Advertisement -


ಅಫ್ಘಾನಿಸ್ತಾನದಿಂದ ಹೆಚ್ಚಾಗಿ ಭಾರತ ಒಣಹಣ್ಣುಗಳನ್ನು ಆಮದು ಮಾಡಿಕೊಳ್ಳುತ್ತದೆ. ಇದೀಗ ಅಫ್ಘಾನಿಸ್ತಾನ ತಾಲಿಬಾನ್ ಗಳ ನಿಯಂತ್ರಣಕ್ಕೆ ಬಂದ ನಂತರ ಒಣಹಣ್ಣುಗಳ ಸರಬರಾಜು ನಿಂತಿದೆ. ಹೀಗಾಗಿ ಬಾದಾಮಿ, ಪಿಸ್ತಾ ಮತ್ತು ಅಂಜೂರದ ಬೆಲೆ ಹೆಚ್ಚಾಗಿದೆ.


ಅಫ್ಘಾನಿಸ್ತಾನದಿಂದ ಭಾರತಕ್ಕೆ ಕಾಫಿ, ಸಕ್ಕರೆ, ಚಾ, ಬಟ್ಟೆ ಈರುಳ್ಳಿ, ಮುಂತಾದ ವಸ್ತುಗಳನ್ನು ತರಲಾಗುತ್ತದೆ. ಆದರೆ ಇದೀಗ ಭಾರತದೊಂದಿಗಿನ ರಫ್ತು ಆಮದು ವ್ಯವಹಾರ ಸದ್ಯಕ್ಕೆ ಸ್ಥಗಿತಗೊಂಡಿದೆ.



Join Whatsapp