“ಸ್ವತಂತ್ರ ಭಾರತದಲ್ಲಿ ಬಗೆಹರಿಯದ ಮಹಿಳೆಯರ ಸಮಸ್ಯೆಗಳು” ಕುರಿತು ವಿಮ್ ನಿಂದ ವೆಬಿನಾರ್

Prasthutha|

ಮಂಗಳೂರು: ವಿಮೆನ್ ಇಂಡಿಯಾ ಮೂಮೆಂಟ್ ಕರ್ನಾಟಕ ಇದರ ವತಿಯಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ‘ಸ್ವತಂತ್ರ ಭಾರತದಲ್ಲಿ ಬಗೆಹರಿಯದ ಮಹಿಳೆಯರ ಸಮಸ್ಯೆಗಳು’ ಎಂಬ ವಿಷಯದಲ್ಲಿ ಆಗಸ್ಟ್ 15 ರಂದು ವೆಬಿನಾರ್ ನಡೆಯಿತು.
ವೆಬಿನಾರ್ ಉದ್ಘಾಟಿಸಿ ಮಾತನಾಡಿದ ವಿಮ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಾಸ್ಮಿನ್ ಇಸ್ಲಾಂ, ಕೇಂದ್ರ ಸರಕಾರ ಮುಸ್ಲಿಮ್ ಮಹಿಳೆಯರ ತಲಾಕ್ ವಿಷಯದಲ್ಲಿ ಹಸ್ತಕ್ಷೇಪ ನಡೆಸಿದೆ. ವಾಸ್ತವವಾಗಿ ಭಾರತದಲ್ಲಿ ಮಹಿಳೆ ವಿವಿಧ ರೀತಿಯ ಆಕ್ರಮಣ ಮತ್ತು ನ್ಯಾಯ ವ್ಯವಸ್ಥೆಯ ತಾರತಮ್ಯ ನೀತಿಯಿಂದ ಶೋಷಣೆಗೊಳಗಾಗುತ್ತಿದ್ದಾಳೆ. ಇದನ್ನು ನಿಲ್ಲಿಸಲು ಮೊದಲು ಕ್ರಮ ಕೈಗೊಳ್ಳಲಿ ಎಂದು ಹೇಳಿದರು.

- Advertisement -


ವೆಬಿನಾರ್ ನ ಅಧ್ಯಕ್ಷತೆ ವಹಿಸಿ ಮಾತನಾಡಿದ ವಿಮ್ ರಾಜ್ಯಾಧ್ಯಕ್ಷೆ ಶಾಹಿದಾ ತಸ್ನೀಂ, ಅಧಿವೇಶನ ನಡೆಯುತ್ತಿರುವಾಗಲೇ ದೆಹಲಿಯ ನಂಗಲ್ ನಲ್ಲಿ 9 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದ ಬಗ್ಗೆ ವರದಿಯಾಗಿದೆ. ಆದರೆ ಸಂಸತ್ ನಲ್ಲಿರುವ ಯಾವ ಮಹಿಳಾ ಮಣಿಗಳು ಈ ಬಗ್ಗೆ ಚಕಾರವೆತ್ತಿಲ್ಲ. ಆದ್ದರಿಂದ ಮಹಿಳೆಯ ಹಕ್ಕುಗಳ ಬಗ್ಗೆ ಧ್ವನಿಯಾಗಲು ಹೆಚ್ಚು ಮಹಿಳೆಯರನ್ನು ಸಂಸತ್ ಗೆ ಕಳುಹಿಸಬೇಕಾಗಿದೆ ಎಂದು ಹೇಳಿದರು.


ಮುಖ್ಯ ಅತಿಥಿಗಳಾಗಿ ಭಾವಹಿಸಿದ ಕರ್ನಾಟಕ ಜನಶಕ್ತಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಲ್ಲಿಗೆ ಸಿರಿಮನೆ, ನ್ಯಾಷನಲ್ ವಿಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಝೀನತ್ ಗೂಡಿನಬಳಿ, ಪಿಯುಸಿಎಲ್ ಹಾಗೂ ಮಹಿಳಾ ಹಾಗೂ ಮಾನವ ಹಕ್ಕು ಹೋರಾಟಗಾರ್ತಿ ಡಾ. ರತಿ ರಾವ್, ಮಹಿಳಾ ಹಕ್ಕುಗಳು ಮತ್ತು ಹೋರಾಟದ ಬಗ್ಗೆ ವಿಷಯ ಮಂಡಿಸಿ ಸಮಾನ ಮನಸ್ಕರೆಲ್ಲರೂ ಒಂದಾಗಿ ಹೋರಾಡಬೇಕಾಗಿದೆ ಎಂದು ಕರೆಯಿತ್ತರು.

- Advertisement -


ವಿಮ್ ರಾಜ್ಯ ಪ್ರಧಾನ ಕಾರ್ಯದರ್ಶಿ ಆಯಿಶಾ ಬಜ್ಪೆ ಪ್ರಾಸ್ತಾವಿಕವಾಗಿ ಮಾತನಾಡಿ ವಿಮ್ ರಾಜ್ಯ ಕೋಶಾಧಿಕಾರಿ ಶಾಝಿಯಾ ಫೈರೋಜ್ ಸ್ವಾಗತಿಸಿದರು. ರಾಜ್ಯ ಉಪಾಧ್ಯಕ್ಷೆ ಸಾಬಿರಾ ಬೇಗಂ ವಂದಿಸಿದರು. ರಾಜ್ಯ ಸಮಿತಿ ಸದಸ್ಯರಾದ ನಸ್ರಿಯಾ ಬೆಳ್ಳಾರೆ ಹಾಗೂ ಸಾದಿಯಾ ಸೈದಾ ವೆಬಿನಾರ್ ನಿರೂಪಿಸಿದರು.



Join Whatsapp