ಒಲಿಂಪಿಕ್ಸ್ ಪದಕ ಹರಾಜು ಹಾಕಿ ಮಗುವಿನ ಚಿಕಿತ್ಸೆಗೆ ನೆರವಾದ ಜಾವಲಿನ್ ಆಟಗಾರ್ತಿ

Prasthutha|

ಹೊಸದಿಲ್ಲಿ : ಎಂಟು ತಿಂಗಳ ಮಗುವಿನ ಹೃದಯ ಶಸ್ತ್ರ ಚಿಕಿತ್ಸೆಗೆ ನೆರವಾಗುವ ಉದ್ದೇಶದಿಂದ ಪೋಲೆಂಡ್ ನ ಜಾವೆಲಿನ್ ಎಸೆತಗಾರ್ತಿ ಮರಿಯಾ ಆಂಡ್ರೆಜಿಝೈಕ್ ಅವರು ಟೋಕಿಯೋ ಒಲಿಂಪಿಕ್ಸ್ ನಲ್ಲಿ ಗೆದ್ದ ಬೆಳ್ಳಿ ಪದಕವನ್ನು ಹರಾಜು ಹಾಕಿ ನೆರವಾಗಿದ್ದಾರೆ.

- Advertisement -

2016ರಲ್ಲಿ ರಿಯೋ ಒಲಿಂಪಿಕ್ಸ್ ನಲ್ಲಿ ಅಲ್ಪ ದರಲ್ಲಿಯೇ ಪದಕ ವಂಚಿತೆಯಾಗಿದ್ದ ಮರಿಯಾ 2017ರಲ್ಲಿ ಭುಜದ ಗಾಯದಿಂದಾಗಿ ಭಾಗವಹಿಸಿರಲಿಲ್ಲ. ನಂತರ 2018ರಲ್ಲಿ ಆಕೆಗೆ ಮೂಳೆ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಂತರ ಚಿಕಿತ್ಸೆ ಪಡೆದು ಗುಣಮುಖರಾದ ಆಕೆ ಈ ಬಾರಿಯ ಟೋಕಿಯೋ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದಿದ್ದಾರೆ, ಇದು ಅವರ ಮೊದಲ ಒಲಿಂಪಿಕ್ಸ್ ಪದಕವಾಗಿದೆ.

ಗಂಭೀರ ಸ್ಥಿತಿಯಲ್ಲಿರುವ ಮಗುವಿನ ಶಸ್ತ್ರಚಿಕಿತ್ಸೆಗೆ ನಿಧಿ ಸಂಗ್ರಹಿಸಲಾಗುತ್ತಿರುವ ಕುರಿತು ಆಕೆ ಫೇಸ್ ಬುಕ್ ಮೂಲಕ ತಿಳಿದುಕೊಂಡಿದ್ದರು. ಈ ಶಸ್ತ್ರಚಿಕಿತ್ಸೆಗೆ 1.5 ಮಿಲಿಯನ್ ಪೋಲಿಶ್ ಝ್ಲೋಟಿ (ರೂ. 2.86 ಕೋಟಿ) ಅಗತ್ಯವಿದೆ ಎಂದು ತಿಳಿದು ತಮ್ಮ ಪದಕವನ್ನು ಹರಾಜು ಹಾಕಿದ್ದು ಅದಕ್ಕೆ ಬಿಡ್ ಅನ್ನು ಪೋಲಿಶ್ ಸ್ಟೋರ್ ಝಬ್ಕಾ ಗೆದ್ದಿದೆ ಎಂದು ಮರಿಯಾ ದೃಢೀಕರಿಸಿದ್ದಾರೆ. ಈ ಮೂಲಕ ಮಗುವಿನ ಚಿಕಿತ್ಸೆಗೆ ಅವರು ರೂ. 1.4 ಕೋಟಿ ದೇಣಿಗೆ ನೀಡಿದ್ದಾರೆ.

Join Whatsapp