ಆರ್ ಎಸ್ ಎಸ್ ಭಾರತದ ತಾಲಿಬಾನಿಗಳು: ಆರ್. ಧ್ರುವನಾರಾಯಣ

Prasthutha|

ಚಾಮರಾಜನಗರ: ಆರ್ ಎಸ್ ಎಸ್ ಭಾರತದ ನಿಜವಾದ ತಾಲಿಬಾನಿಗಳು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಹೇಳಿದ್ದಾರೆ.
ಸಿಎಎ ವಿರೋಧಿಗಳು ಅಫ್ಘಾನಿಸ್ತಾನ ನೋಡಿ ತಿಳಿಯಲಿ ಎಂಬ ಸಂಸದ ಪ್ರತಾಪ್ ಸಿಂಹ ಹೇಳಿಕೆಗೆ ಧ್ರುವನಾರಾಯಣ ತಿರುಗೇಟು ನೀಡಿದ್ದಾರೆ.

- Advertisement -


ತಾಲಿಬಾನಿಗಳು ಯಾವ ರೀತಿ ಅವರ ಧರ್ಮ ಪಾಲನೆ ಮಾಡುತ್ತಾರೋ ಅದೇ ರೀತಿ, ಭಾರತದಲ್ಲಿ ಆರ್ ಎಸ್ ಎಸ್ ಮಾಡುತ್ತಿದೆ. ತಾಲಿಬಾನಿಗೂ ಸಿಎಎಗೂ ಹೇಗೆ ಸಂಬಂಧ ಕಲ್ಪಿಸುತ್ತಾರೆ. ತಾಲಿಬಾನ್ನಿಂದ ದೇಶಕ್ಕೆ ಆಗುವ ಅನಾಹುತದ ಬಗ್ಗೆ ಕಟ್ಟೆಚ್ಚರ ವಹಿಸುವ ಕುರಿತು ಸಂಸದರು ಯೋಚಿಸಲಿ ಎಂದು ಕಿವಿಮಾತು ಹೇಳಿದರು.


ಬಾಂಗ್ಲಾದೇಶದಿಂದ ಅಸ್ಸಾಂಗೆ ಮುಸ್ಲಿಮರು ಹೆಚ್ಚು ಬಂದಿದ್ದಾರೆ ಎಂಬ ದೃಷ್ಟಿಕೋನದಿಂದ ಸಿಎಎ, ಎನ್ ಆರ್ ಸಿ ಜಾರಿಗೆ ತಂದರು. ಆದರೆ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರುವುದು ತಿಳಿದ ಬಳಿಕ ಸುಮ್ಮನಾದರು. ಕೋಮುವಾದಿತನವನ್ನೇ ಇಟ್ಟುಕೊಂಡು ಮಾತನಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಆಕ್ರೋಶ ವ್ಯಕ್ತಪಡಿಸಿದರು.

- Advertisement -

ಇದಕ್ಕೂ ಮೊದಲು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದ ಸಂಸದ ಪ್ರತಾಪ್ ಸಿಂಹ, ದೇಶದಲ್ಲಿ ಸಿಎಎ ಕಾಯ್ದೆಯನ್ನು ಏಕೆ ಜಾರಿಗೆ ತರಲಾಗಿದೆ ಎಂಬುದನ್ನು ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ತಾಲಿಬಾನ್ ಉಗ್ರರ ಅಟ್ಟಹಾಸ ನೋಡಿ ಅರ್ಥಮಾಡಿಕೊಳ್ಳಬೇಕಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಇಂತಹ ಪರಿಸ್ಥಿತಿ ಮೊದಲೇ ಅರಿತು ಸಿಎಎ ಕಾಯ್ದೆ ಜಾರಿಗೊಳಿಸಿದ್ದಾರೆ ಎಂದಿದ್ದರು.

ಸದ್ಯ ಅಫ್ಘಾನಿಸ್ತಾನದ ಸುತ್ತಮುತ್ತ ಹಲವಾರು ಮುಸ್ಲಿಂ ರಾಷ್ಟ್ರಗಳಿದ್ದು, ಯಾರೂ ಅಫ್ಘಾನಿಸ್ತಾನದವರನ್ನು ಕರೆಸಿಕೊಳ್ಳುತ್ತಿಲ್ಲ. ಸಿರಿಯಾ ಮತ್ತು ತಾಲಿಬಾನ್ ಮಾನವ ವಿರೋಧಿಗಳೆಂಬುದು ಇದೀಗ ಸಾಬೀತಾಗಿದೆ. ಈ ರೀತಿಯ ಮನಸ್ಥಿತಿ ಕೇವಲ ತಾಲಿಬಾನ್ ಗಳಿಗಷ್ಟೇ ಅಲ್ಲ, ಭಾರತದಲ್ಲೂ ಅಂತಹದೇ ಜನರಿದ್ದಾರೆ. ಈ ರೀತಿಯ ಅಪಾಯಗಳನ್ನು ತಪ್ಪಿಸಲು ಸಿಎಎ ಕಾನೂನು ತರಲಾಗಿದೆ ಎಂದು ಹೇಳಿಕೆ ನೀಡಿದ್ದರು.



Join Whatsapp