ತಾಲಿಬಾನ್ ಜೊತೆಗೆ ಸೌಹಾರ್ದ ಬಾಂಧವ್ಯಕ್ಕೆ ಮುಂದಾದ ಚೈನಾ

Prasthutha|

ಬೀಜಿಂಗ್: ತಾಲಿಬಾನ್ ಬಂಡುಕೋರರು ಅಫ್ಘಾನ್ ರಾಷ್ಟ್ರವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡ ನಂತರ ಸರ್ಕಾರ ರಚನೆಗೆ ಮುಂದಾಗಿರುವ ತಾಲಿಬಾನ್ ನೊಂದಿಗೆ ಉತ್ತಮ ಸ್ನೇಹ ಬಾಂಧವ್ಯಕ್ಕೆ ಸಿದ್ಧವಿದೆಯೆಂದು ಚೈನಾ ಸೋಮವಾರ ತಿಳಿಸಿದೆ.

- Advertisement -

ಅಫ್ಘಾನ್ ಜನತೆಯ ಸ್ವಾತಂತ್ರ್ಯದ ಹಕ್ಕನ್ನು ಚೈನಾ ಗೌರವಿಸಲಿದೆ ಮತ್ತು ತಾಲಿಬಾನ್ ನೊಂದಿಗೆ ಉತ್ತಮ ಸ್ನೇಹಪರ, ಸಹಕಾರಿ ಬಾಂಧವ್ಯವನ್ನು ಮುಂದುವರಿಸಲು ಸಿದ್ದವಿದೆಯೆಂದು ವಿದೇಶಾಂಗ ಸಚಿವಾಲಯದ ವಕ್ತಾರ ಹುವಾ ಚುನಿಂಗ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಲಿಬಾನ್ ಬಂಡುಕೋರರು ಅಫ್ಘಾನಿಸ್ತಾನವನ್ನು ವಶಪಡಿಸಿದ ಹಿನ್ನೆಲೆಯಲ್ಲಿ ನಡೆದ ಗುಂಡಿನ ದಾಳಿಯಿಂದಾಗಿ ಸೋಮವಾರ ಕನಿಷ್ಠ 5 ಮಂದಿ ಮೃತರಾಗಿರುವುದು ಮಾಧ್ಯಮಗಳು ವರದಿ ಮಾಡಿವೆ. ಮಾತ್ರವಲ್ಲದೆ ಅಫ್ಘಾನ್ ತೊರೆಯುವ ಅವಾಂತರಲ್ಲಿ ಹಾರಾಟ ನಡೆಸುತ್ತಿದ್ದ ವಿಮಾನದಿಂದ 2 ಪ್ರಯಾಣಿಕರು ಕೆಳಗೆ ಬಿದ್ದಿರುವ ಘಟನೆ ಕಾಬೂಲ್ ನಿಂದ ವರದಿಯಾಗಿದೆ.



Join Whatsapp