ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಮುಸ್ಲಿಮರೇ ಅಧಿಕ: ಎನ್ ಸಿಪಿಸಿಆರ್

Prasthutha|

ದೆಹಲಿ: ಶಾಲೆಯಿಂದ ಹೊರಗುಳಿದ ಮಕ್ಕಳಲ್ಲಿ ಮುಸ್ಲಿಮ್ ಸಮುದಾಯದವರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಎನ್ ಸಿಪಿಸಿಆರ್- ಮಕ್ಕಳ ಹಕ್ಕುಗಳ ರಕ್ಷಣೆಯ ರಾಷ್ಟ್ರೀಯ ಆಯೋಗವು ಶಿಕ್ಷಣ ಹಕ್ಕು ಕಾಯ್ದೆ, ಸರ್ವ ಶಿಕ್ಷಣ ಅಭಿಯಾನಗಳಡಿ ಮದ್ರಸಾಗಳ ಸಹಿತ ಎಲ್ಲ ಶಾಲೆಗಳ ಅಧ್ಯಯನ ನಡೆಸಿ ಹೊರತಂದಿರುವ ವರದಿ ತಿಳಿಸಿದೆ.

- Advertisement -

ದೊಡ್ಡ ಪ್ರಮಾಣದಲ್ಲಿ ಅಲ್ಪಸಂಖ್ಯಾತರಲ್ಲದ ಮಕ್ಕಳೇ ಓದುವ ಶಾಲೆಗಳಲ್ಲಿ ಅಲ್ಪಸಂಖ್ಯಾತ ಮಕ್ಕಳಿಗೆ ಓದಲು ಮೀಸಲು ಅವಕಾಶ ನೀಡಬೇಕು ಎಂದು ಎನ್ ಸಿಪಿಸಿಆರ್ ಶಿಫಾರಸು ಮಾಡಿದೆ. ಎನ್ ಸಿಪಿಸಿಆರ್ ವರದಿಯಂತೆ ಕ್ರಿಶ್ಚಿಯನ್ ಮಿಶನರಿ ಶಾಲೆಗಳಲ್ಲಿ ಓದುವ 74% ವಿದ್ಯಾರ್ಥಿಗಳು ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದವರಲ್ಲ. ಭಾರತೀಯ ಸಂವಿಧಾನದ ವಿಧಿ 21ಎ ಮತ್ತು ವಿಧಿ 15(5)ರ ಪರಿಣಾಮ ಎಷ್ಟು ಎಂಬುದೇ ಈ ವರದಿಯ ಸೂತ್ರವಾಗಿದೆ. ಶಾಲೆಯಿಂದ ಹೊರಗಿರುವ ಮಕ್ಕಳಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದವರೇ ಅಧಿಕವಾಗಿದ್ದು ಅವರ ಸಂಖ್ಯೆ 1.1 ಕೋಟಿ ಎಂದು ವರದಿಯಲ್ಲಿ ಹೇಳಲಾಗಿದೆ.

ಎನ್ ಸಿಪಿಸಿಆರ್ ಅಧ್ಯಕ್ಷ ಪ್ರಿಯಾಂಕ್ ಕನೂಂಗೊ, ಮುಸ್ಲಿಮರ ಸಹಿತ ಅಲ್ಪಸಂಖ್ಯಾತರಿಗೆ ಸೇರಿದ ವಿದ್ಯಾಸಂಸ್ಥೆಗಳು ತಮ್ಮ ಜನಾಂಗದ ಮಕ್ಕಳ ಶಿಕ್ಷಣದ ಬಗೆಗೆ ಯಾವುದೇ ಕಾರ್ಯ ಯೋಜನೆಯನ್ನು ಹೊಂದಿಲ್ಲ. ರೈಟ್ ಎಜುಕೇಶನ್ ಕಾಯ್ದೆ ನೀತಿಯೂ ಪಾಲನೆಯಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.



Join Whatsapp