ಲಂಡನ್ : ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಪ್ (71 ) ಅವರು ವೀಸಾ ಅವಧಿ ವಿಸ್ತರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಬ್ರಿಟನ್‌ನ ಗೃಹ ಸಚಿವಾಲಯ ತಿರಸ್ಕರಿಸಿದೆ ಎಂದು ತಿಳಿದು ಬಂದಿದೆ.
ನವಾಜ್ ಷರೀಫ್ ಪಾಕಿಸ್ತಾನದಲ್ಲಿ ಎರಡು ಭ್ರಷ್ಟಾಚಾರ ಪ್ರಕರಣಗಳಲ್ಲಿ ಶಿಕ್ಷೆಗೆ ಒಳಗಾಗಿದ್ದು, ವಿದೇಶಕ್ಕೆ ಹೋಗಲು ಲಾಹೋರ್ ಹೈಕೋರ್ಟ್ ಅನುಮತಿ ನೀಡಿದ ನಂತರ, ನವೆಂಬರ್ 2019ರಿಂದಲೂ ಲಂಡನ್‌ನಲ್ಲೇ ನೆಲೆಸಿದ್ದಾರೆ.
ಇನ್ನು ನವಾಜ್ ಷರೀಫ್ ಅವರ ವೀಸಾ ಅವಧಿ ವಿಸ್ತರಿಸಲಾಗದು ಎಂದು ಬ್ರಿಟನ್‌ನ ಗೃಹ ಸಚಿವಾಲಯ ತಿಳಿಸಿದೆ ವರದಿಯಾಗಿದೆ.
ಈ ಪ್ರಕರಣ ಇತ್ಯರ್ಥವಾಗುವವರೆಗೂ ಷರೀಫ್ ಅವರು ಲಂಡನ್‌ನಲ್ಲೇ ನೆಲೆಸಲಿದ್ದಾರೆ ಎಂದು ಪಿಎಂಎಲ್–ಎನ್ ವಕ್ತಾರ ಔರಂಗಜೇಬ್ ಅವರು ತಿಳಿಸಿದ್ದಾರೆ.