ಸುಪ್ರೀಂ ಕೋರ್ಟ್ ಮಾಜಿ ನ್ಯಾಯಾಧೀಶರ ಫೋನನ್ನೂ ಸೋರಿಕೆ ಮಾಡಿದ ಪೆಗಾಸಸ್!

Prasthutha|

ಜಸ್ಟೀಸ್ ಲೋಯಾ ಅವರ ನಿಗೂಢ ಸಾವು ಸೇರಿದಂತೆ ಹಲವಾರು ವಿವಾದಾತ್ಮಕ ಪ್ರಕರಣಗಳನ್ನು ವಿಚಾರಣೆ ನಡೆಸಿದ ನ್ಯಾಯಾಧೀಶ

- Advertisement -

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನ ಮಾಜಿ ನ್ಯಾಯಾಧೀಶ ಅರುಣ್ ಮಿಶ್ರಾ ಅವರ ಫೋನನ್ನು ಕೂಡ ಪೆಗಾಸಸ್ ಬಳಸಿ ಸೋರಿಕೆ ಮಾಡಿರುವುದು ಇದೀಗ ಬೆಳಕಿಗೆ ಬಂದಿದೆ.  ಪೆಗಾಸಸ್ ಮಾಜಿ ನ್ಯಾಯಾಧೀಶರ ಫೋನ್ ಸೋರಿಕೆ ಮಾಡಿರುವುದನ್ನು ದಿ ವೈರ್ ಸೇರಿದಂತೆ ಮಾಧ್ಯಮಗಳು ವರದಿ ಮಾಡಿದೆ.

ಸೆಪ್ಟೆಂಬರ್ 2010 ರಿಂದ 2018 ರವರೆಗೆ ಅರುಣ್ ಮಿಶ್ರಾ ಬಳಸಿದ ಫೋನ್ ಪೆಗಾಸಸ್ ಸ್ಪೈ ಸಾಫ್ಟ್ ವೇರ್ ಬಳಸಿ ಸೋರಿಕೆ ಮಾಡಿರುವ ಬಗ್ಗೆ ವರದಿಯಾಗಿದೆ.  ಜಸ್ಟೀಸ್ ಲೋಯಾ ಅವರ ನಿಗೂಢ ಸಾವು ಸೇರಿದಂತೆ ಹಲವಾರು ವಿವಾದಾತ್ಮಕ ಪ್ರಕರಣಗಳು ಅರುಣ್ ಮಿಶ್ರಾ ಅವರ ಪೀಠದಲ್ಲಿತ್ತು.

- Advertisement -

ಅರುಣ್ ಮಿಶ್ರಾ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ನಿಂದ ನಿವೃತ್ತರಾಗಿದ್ದರು. ಅಲ್ಲದೆ, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವಿರುದ್ಧ ಪತ್ರಿಕಾಗೋಷ್ಠಿ ನಡೆಸಿದ ನಾಲ್ವರು ನ್ಯಾಯಾಧೀಶರಲ್ಲಿ ಅರುಣ್ ಮಿಶ್ರಾ ಕೂಡ ಒಬ್ಬರು. ಅರುಣ್ ಮಿಶ್ರಾ ಹಲವಾರು ವಿವಾದಾತ್ಮಕ ಪ್ರಕರಣಗಳನ್ನು ವಿಚಾರಣೆ ನಡೆಸಿದ್ದರು. ಇದಕ್ಕೂ ಮೊದಲು ಅವರು ಬಳಸಿದ ಫೋನ್ ಸಂಖ್ಯೆ ಸೋರಿಕೆಯಾಗಿದೆ ಎಂದು ತಿಳಿದು ಬಂದಿದೆ.

ನಾಳೆ ಪೆಗಾಸಸ್ ಪ್ರಕರಣದ ತನಿಖೆಯನ್ನು ಕೋರಿ ಸಲ್ಲಿಸಲಾಗಿರುವ ಅರ್ಜಿಯ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸಲಿರುವ ನಡುವೆ ಇದೀಗ ನ್ಯಾಯಾಂಗಕ್ಕೆ ಸಂಬಂಧಿಸಿದ ಸುದ್ದಿಯೊಂದು ಬಹಿರಂಗವಾಗಿದೆ.



Join Whatsapp