ಮೊಟ್ಟೆ ಹಗರಣದ ರೂವಾರಿ ಶಶಿಕಲಾ ಜೊಲ್ಲೆಗೆ ಮತ್ತೆ ಮಂತ್ರಿ ಪಟ್ಟ; ಭ್ರಷ್ಟಾಚಾರಕ್ಕೆ ಸರಕಾರ ಸಮ್ಮತಿ ಸೂಚಿಸಿತೇ?: ಕ್ಯಾಂಪಸ್ ಫ್ರಂಟ್

Prasthutha|

ಬೆಂಗಳೂರು: ಇತ್ತೀಚಿಗೆ ಮಾಧ್ಯಮವೊಂದರ ರಹಸ್ಯ ಕಾರ್ಯಾಚರಣೆಯಲ್ಲಿ ಅಂಗನವಾಡಿ ಮಕ್ಕಳಿಗೆ, ಗರ್ಭಿಣಿ ಮಹಿಳೆಯರಿಗೆ ಪೌಷ್ಟಿಕಾಂಶವನ್ನು ಹೆಚ್ಚಿಸಲು ಸರ್ಕಾರದಿಂದ ನೀಡಲ್ಪಡುವ ಮೊಟ್ಟೆಗಳನ್ನು ಖರೀದಿಸುವ ವಿಚಾರವಾಗಿ ಮಾತನಾಡುತ್ತಾ ಭ್ರಷ್ಟಾಚಾರಕ್ಕೆ ಆಸ್ಪದ ನೀಡಿದ್ದ  ಸಚಿವೆ ಶಶಿಕಲಾ ಜೊಲ್ಲೆ ಮತ್ತು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿರವರ ವಿಡಿಯೋ ವೈರಲ್ ಆಗಿತ್ತು ಹಾಗೂ ಇದರ ಕುರಿತಾಗಿ ಲೋಕಾಯುಕ್ತ ಮತ್ತು ಇತರೆ ತನಿಖಾ ಸಂಸ್ಥೆಗಳಲ್ಲಿ ದೂರು ಸಹ ದಾಖಲಾಗಿತ್ತು.

- Advertisement -

ಈ ಮೊಟ್ಟೆ ಹಗರಣದ ಪ್ರಕರಣ ಇಡೀ ರಾಜ್ಯದಲ್ಲಿ ಸದ್ದು ಮಾಡಿತ್ತು, ಲಕ್ಷ, ಕೋಟಿಗಳ ಡೀಲ್ ಗಳ ಬಟಾ ಬಯಲಾಗಿತ್ತು. ರಾಜ್ಯದಲ್ಲಿ ಮೈತ್ರಿ ಸರಕಾರವನ್ನು ಕೆಡವಿ ಅಕ್ರಮವಾಗಿ ಇತರೆ ಪಕ್ಷದ ಶಾಸಕರನ್ನು ಖರೀದಿಸಿ ರಚಿಸಲಾಗಿರುವ ಸರಕಾರದಲ್ಲಿ ಕಳೆದೆರಡು ವರ್ಷಗಳಿಂದ ಇಂತಹ ಹಲವಾರು ಪ್ರಕರಣಗಳು ನಡೆದು ಹೋದರು ಯಾರು ಕೇಳುವಂತಿಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ಕೇವಲ ಬಡ ಜನತೆಗೆ ಮಾತ್ರ ಹೇರಿಕೆ ಎಂಬಂತಿದೆ. ಇಷ್ಟೆಲ್ಲ ಆದರೂ ಸಹ ಸದ್ಯಕ್ಕೆ ಅಸ್ತಿತ್ವದಲ್ಲಿರುವ ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ರವರ ನೇತೃತ್ವದ ಸರಕಾರದಲ್ಲಿ ಆರೋಪಿ ಸ್ಥಾನದಲ್ಲಿರುವ ಶಶಿಕಲಾ ಜೊಲ್ಲೆರವರ ವಿರುದ್ಧ ಯಾವುದೇ ಕ್ರಮ ತಗೆದುಕೊಳ್ಳದೆ ಮತ್ತೇ ಮಂತ್ರಿ ಸ್ಥಾನ ಕೊಡುವುದೆಂದರೆ, ಇದರ ಅರ್ಥವೇನು? ರಾಜ್ಯ ಸರಕಾರ ಭ್ರಷ್ಟಾಚಾರಿಗಳಿಗೆ ಮಣೆ ಹಾಕಿ, ಸಮಾಜಕ್ಕೆ ಯಾವ ಸಂದೇಶ ನೀಡಲು ಹೊರಟಿದೆ ಎಂಬುದು ರಾಜ್ಯದ ಪ್ರಜ್ಞಾವಂತ ಜನ ಅವಲೋಕನಮಾಡಬೇಕಾಗಿದೆ ಮತ್ತು ಇಂತಹ ಭ್ರಷ್ಟ ವ್ಯವಸ್ಥೆಯನ್ನು ಸರಿಪಡಿಸಬೇಕಾದರೆ ವಿದ್ಯಾರ್ಥಿಗಳ ಜವಾಬ್ದಾರಿ ಮಹತ್ವದ್ದಾಗಿದೆ ಎಂದು ಕ್ಯಾಂಪಸ್ ಫ್ರಂಟ್ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅನೀಸ್ ಕುಂಬ್ರ ಪ್ರಕಟಣೆಯಲ್ಲಿ ಹೇಳಿದ್ದಾರೆ.

Join Whatsapp