ಭಾರತ, ಪಾಕಿಸ್ತಾನ ಸೇರಿ 6 ದೇಶಗಳ ಪ್ರಯಾಣಿಕರ ಮುಕ್ತ ಪ್ರವೇಶಕ್ಕೆ ಅನುಮತಿ ನೀಡಿದ ಯುಎಇ

Prasthutha|

ದುಬೈ, ಅಗಸ್ಟ್ 3: ಭಾರತ ಸೇರಿದಂತೆ ಆರು ದೇಶಗಳಲ್ಲಿರುವ ಯುಎಇ ವಿಸಾ ಹೊಂದಿರುವ ನಿವಾಸಿಗಳು ಯುಎಇಗೆ ಮರಳಬಹುದೆಂದು ಮಂಗಳವಾರ ಅಲ್ಲಿನ ಸರ್ಕಾರ ಪ್ರಕಟಿಸಿದೆ.

- Advertisement -

ಕೋವಿಡ್ 19 ಸಂಪೂರ್ಣವಾದ ಲಸಿಕೆ ಹಾಕಿದ, ಯುಎಇ ರೆಸಿಡೆನ್ಸಿ ವೀಸಾ ಹೊಂದಿರುವ ಪ್ರಯಾಣಿಕರಿಗೆ ಆಗಸ್ಟ್ 5 ರಿಂದ ಯುಎಇ ಪ್ರವೇಶಕ್ಕೆ ಅನುಮತಿ ನೀಡಲಾಗಿದೆ. ಅದೇ ರೀತಿ ಎರಡನೇ ಡೋಸ್ ಪಡೆದ 14 ದಿನಗಳ ನಂತರ ಲಸಿಕೆ ಪ್ರಮಾಣಪತ್ರ ಹೊಂದಿರುವವರು ಯುಎಇ ಪ್ರಯಾಣ ಬೆಳೆಸಬಹುದು.

ಭಾರತ, ಪಾಕಿಸ್ತಾನ, ಶ್ರೀಲಂಕಾ, ನೇಪಾಳ, ನೈಜೀರಿಯಾ ಮತ್ತು ಉಗಾಂಡಾದ ಪ್ರಯಾಣಿಕರಿಗೆ ವಿನಾಯಿತಿಗಳು ಅನ್ವಯಿಸುತ್ತದೆಯೆಂದು ರಾಷ್ಟ್ರೀಯ ತುರ್ತುಸ್ಥಿತಿ ಬಿಕ್ಕಟ್ಟು ಮತ್ತು ವಿಪತ್ತು ನಿರ್ವಹಣಾ ಪ್ರಾಧಿಕಾರ (NCEMA) ಘೋಷಿಸಿದೆ.
ಹಿಂದೆ ಈ ದೇಶಗಳಿಂದ ಪ್ರಯಾಣಿಕರ ಪ್ರವೇಶವನ್ನು ತಡೆಹಿಡಿಯಲಾಗಿತ್ತು. ಈ ವಿನಾಯಿತಿ ಪಡೆದವರ ಪಟ್ಟಿಯನ್ನು ಯುಎಇ ಪ್ರಕಟಿಸಿದ್ದು, ಅವುಗಳಲ್ಲಿ ಪ್ರಮುಖವಾಗಿ ಯುಎಇಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯರು, ಶಿಕ್ಷಕರು, ನರ್ಸ್ ಗಳು, ಸರ್ಕಾರಿ ಮತ್ತು ಸ್ಥಳೀಯ ಆಡಳಿತದಲ್ಲಿ ಕೆಲಸ ಮಾಡುವವರು ಸೇರಿದ್ದಾರೆ.

Join Whatsapp