ಪೆಗಾಸಸ್ ಹಗರಣದಲ್ಲಿ NDA ನಡುವೆ ಭಿನ್ನಮತ| ತನಿಖೆಗೆ ಆಗ್ರಹಿಸಿದ ನಿತೀಶ್ ಕುಮಾರ್

Prasthutha|

ಹೊಸದಿಲ್ಲಿ: ಪೆಗಾಸಸ್ ಹಗರಣದಲ್ಲಿ ಆಡಳಿತಾರೂಢ NDA ನಡುವೆ ಭಿನ್ನಮತವುಂಟಾಗಿದ್ದು, ಬಿಹಾರ ಮುಖ್ಯಮಂತ್ರಿ ಮತ್ತು ಬಿಜೆಪಿ ಮಿತ್ರ ಪಕ್ಷ ಜೆಡಿಯು ನಾಯಕ ನಿತೀಶ್ ಕುಮಾರ್ ಹಗರಣದ ಬಗ್ಗೆ ತನಿಖೆಗೆ ಒತ್ತಾಯಿಸಿದ್ದಾರೆ. ಈ ವಿಚಾರವನ್ನು ಸದನದಲ್ಲಿ ಚರ್ಚಿಸಬೇಕು ಎಂದು ಅವರು ಆಗ್ರಹಿಸಿದರು.

- Advertisement -

‘ಜನರಿಗೆ ಕಿರುಕುಳ ನೀಡಲು ಮತ್ತು ತೊಂದರೆ ಮಾಡಲು ಇಂತಹ ಕೆಲಸಗಳನ್ನು ಮಾಡಬೇಡಿ. ಸಂಸತ್ತಿನಲ್ಲಿ ಹಲವು ದಿನಗಳಿಂದ ಈ ಸಮಸ್ಯೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಮಾಧ್ಯಮಗಳಲ್ಲೂ ಸುದ್ದಿ ಬರುತ್ತಿದೆ. ಆದ್ದರಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಮಾಡಬೇಕು’ಎಂದು ನಿತೀಶ್ ಕುಮಾರ್ ಹೇಳಿದರು.

ಸಂಸತ್ತಿನ ಅಧಿವೇಶನ ಆರಂಭವಾದಾಗಿನಿಂದ ವಿರೋಧ ಪಕ್ಷಗಳು ಪೆಗಾಸಸ್ ಹಗರಣದ ತನಿಖೆಗೆ ಒತ್ತಾಯಿಸುತ್ತಿವೆ. ಕೇಂದ್ರ ಸರ್ಕಾರವು ಈ ಬಗ್ಗೆ ತನಿಖೆ ಅಥವಾ ಚರ್ಚೆಯ ಅಗತ್ಯವಿಲ್ಲ ಎಂದು ಹೇಳಿದೆ.

- Advertisement -

ಇಸ್ರೇಲಿ ಗೂಢಾಚಾರಿ ತಂತ್ರಾಂಶವಾದ ಪೆಗಾಸಸ್ ಬಳಸಿ ವಿಶ್ವಾದ್ಯಂತ ಫೋನ್ ಸೋರಿಕೆಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ಈ ಹಿಂದೆ ವರದಿ ಮಾಡಿತ್ತು. ಭಾರತದಲ್ಲಿ ರಾಹುಲ್ ಗಾಂಧಿ, ಇಬ್ಬರು ಕೇಂದ್ರ ಸಚಿವರು ಮತ್ತು ಹಲವಾರು ಪತ್ರಕರ್ತರು ಸೇರಿದಂತೆ ಪ್ರಮುಖ ರಾಜಕೀಯ ನಾಯಕರ ಫೋನ್‌ಗಳು ಪೆಗಾಸಸ್ ಬಳಸಿ ಸೋರಿಕೆಯಾಗಿರುವುದು ವರದಿಯಾಗಿತ್ತು.



Join Whatsapp