ಐಟಿ ಸೆಕ್ಷನ್ 66ಎ ಮುಂದುವರಿಸದಂತೆ ರಾಜ್ಯಗಳಿಗೆ ಸುಪ್ರೀಮ್ ನೋಟಿಸ್

Prasthutha|

ನವದೆಹಲಿ, ಆಗಸ್ಟ್ 2: ಮಾಹಿತಿ ತಂತ್ರಜ್ಞಾನ ಕಾಯ್ದೆ 66ಎ ಅನ್ನು ಮುಂದುವರಿಸದಂತೆ ರಾಜ್ಯ, ಕೇಂದ್ರಾಡಳಿತ ಪ್ರದೇಶ ಮತ್ತು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಗಳಿಗೆ ಸೋಮವಾರ ಸುಪ್ರೀಮ್ ಕೋರ್ಟ್ ನೋಟಿಸ್ ಜಾರಿಗೊಳಿಸಿದೆ.

- Advertisement -

ನಾಗರಿಕ ಹಕ್ಕುಗಳ ಸಂರಕ್ಷಣಾ ಸಮಿತಿ ಎಂಬ ಎನ್. ಜಿ.ಒ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡಿರುವ ನ್ಯಾಯಮೂರ್ತಿಗಳಾದ ಆರ್.ಎಫ್. ನಾರಿಮನ್ ಮತ್ತು ಬಿ.ಆರ್ ಗವಾಯಿ ಅವರನ್ನೊಳಗೊಂಡ ಪೀಠವು ಐಟಿ ಕಾಯ್ದೆ 66ಎ ಸೆಕ್ಷನ್ ಅನ್ನು ರದ್ದುಪಡಿಸಲಾಗಿದೆಯೆಂದು ತನ್ನ ಆದೇಶದಲ್ಲಿ ಉಲ್ಲೇಖಿಸಿದೆ.

ಈ ಕಾಯ್ದೆಯು ದೇಶಾದ್ಯಂತ ವಿವಿಧ ಪೊಲೀಸ್ ಠಾಣೆಗಳಲ್ಲಿ ಮಾತ್ರವಲ್ಲದೆ ವಿಚಾರಣಾ ನ್ಯಾಯಾಲಯಗಳಲ್ಲಿಯೂ ಬಳಸಲಾಗುತ್ತಿದೆಯೆಂದು ಅರ್ಜಿದಾರರು ವಾದಿಸಿದರು. ಈ ಕುರಿತು ಪ್ರತಿಕ್ರಿಯಿಸಿರುವ ನ್ಯಾಯಾಲಯವು ಈ ಕಾಯ್ದೆಯನ್ನು ರದ್ದುಗೊಳಿಸುವ ನಿಟ್ಟಿನಲ್ಲಿ ಮಹತ್ವದ ಅದೇಶ ಹೊರಡಿಸುವ ಅಗತ್ಯವಿದೆಯೆಂದು ತಿಳಿಸಿದೆ. ಮಾತ್ರವಲ್ಲದೇ ನಾಲ್ಕು ವಾರಗಳ ನಂತರ ಮುಂದಿನ ವಿಚಾರಣೆ ನಡೆಸಲಾಗುವುದೆಂದು ಸುಪ್ರೀಮ್ ವಿವರಿಸಿದೆ.

- Advertisement -

ಸುಪ್ರೀಮ್ ಕೋರ್ಟ್ ಹೊರಡಿಸಿರುವ ಈ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಹೊರಡಿಸಿರುವ ಗೃಹ ಸಚಿವಾಲಯವು ರದ್ದಾಗಿರುವ ಮಾಹಿತಿ ತಂತ್ರಜ್ಞಾನ ಕಾಯ್ದೆ 66ಎ 2000 ರ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸದಂತೆ ತನ್ನ ವ್ಯಾಪ್ತಿಯ ಎಲ್ಲಾ ಪೊಲೀಸ್ ಠಾಣೆಗಳಿಗೆ ನಿರ್ದೇಶನ ನೀಡಿದೆ.

ಮಾಹಿತಿ ತಂತ್ರಜ್ಞಾನ ಕಾಯ್ದೆ 66ಎ 2000 ರ ಅಡಿಯಲ್ಲಿ ಪೊಲೀಸರು ಈ ಕಾನೂನನ್ನು ದುರ್ಬಳಕೆ ಮಾಡಿ ಯಾವುದೇ ವ್ಯಕ್ತಿಯನ್ನು ವಿನಾಕಾರಣ ನೀಡಿ ತಮ್ಮ ಅನುಕೂಲತೆಗೆ ತಕ್ಕಂತೆ ಬಂಧಿಸುತ್ತಿದ್ದರು.



Join Whatsapp