ಮೂರು ವರ್ಷದಲ್ಲಿ 24000 ಮಕ್ಕಳು ಆತ್ಮಹತ್ಯೆ: ಬೆಚ್ಚಿಬೀಳಿಸಿದ ಕೇಂದ್ರದ ವರದಿ!

Prasthutha|

ನವದೆಹಲಿ, ಆ, 2: ಭಾರತದಲ್ಲಿ 2017-19ರ ನಡುವೆ 14-18 ವಯೋಮಾನದ 24 ಸಾವಿರಕ್ಕೂ ಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪೈಕಿ 4000 ಕ್ಕೂ ಹೆಚ್ಚು ಮಕ್ಕಳು ಪರೀಕ್ಷೆಯಲ್ಲಿ ಉತ್ತೀರ್ಣರಾಗಿಲ್ಲ ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರದ ವರದಿ ಹೇಳಿದೆ.

- Advertisement -

ಮಕ್ಕಳ ಸಾವಿನ ಕುರಿತಾಗಿ ಎನ್‌ ಸಿ ಆರ್‌ ಬಿ ವರದಿಯನ್ನು ಸಂಸತ್ತಿನಲ್ಲಿ ಮಂಡಿಸಿತ್ತು, ಈ ಪ್ರಕಾರ 2017-19ರ, ಅವಧಿಯಲ್ಲಿ 24,568 ಮಕ್ಕಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಪೈಕಿ 13,325 ಮಂದಿ ಬಾಲಕಿಯರು ಮತ್ತು 10,675 ಬಾಲಕರು ಎಂದು ಹೇಳಲಾಗಿದೆ. ಆತ್ಮಹತ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚಳ ವಾಗುತ್ತಿದ್ದು, 2017 ರಲ್ಲಿ 8029, 2018 ರಲ್ಲಿ 8168 ಮತ್ತು 2019 ರಲ್ಲಿ 8377 ಮಕ್ಕಳು ತಮ್ಮ ಪ್ರಾಣಕ್ಕೆ ಕತ್ತು ತಂದುಕೊಂಡಿದ್ದಾರೆ.

ಅತಿಹೆಚ್ಚು ಮಕ್ಕಳು ಆತ್ಮಹತ್ಯೆಗೆ ಶರಣಾದ ರಾಜ್ಯಗಳ ಪಟ್ಟಿಯಲ್ಲಿ ಮಧ್ಯಪ್ರದೇಶದಲ್ಲಿ (3115), ಪಶ್ಚಿಮ ಬಂಗಾಳ (2802), ಮಹಾರಾಷ್ಟ್ರ ( 2527 ) ಹಾಗೂ ತಮಿಳುನಾಡಿನಲ್ಲಿ (2035) ಮಕ್ಕಳು ಆತ್ಮಹತ್ಯೆ ಶರಣಾಗಿದ್ದಾರೆ.

- Advertisement -

ಸಾವಿಗೆ ಶರಣಾಗಳು ನಿರುದ್ಯೋಗ , ಬಡತನ, ಪ್ರೀತಿ – ಪ್ರೇಮ ವೈಫಲ್ಯ, ಆತ್ಮೀಯರು ಅಗಲಿದ ಕಾರಣ, ಮಾದಕ ದ್ರವ್ಯ, ಮದ್ಯ ಸೇವನೆ, ಅವಧಿಗೂ ಮುನ್ನವೇ ಗರ್ಭಿಣಿ ಸೇರಿದಂತೆ ಇನ್ನಿತರ ಕಾರಣಗಳಿಂದ ಮಕ್ಕಳು ಆತ್ಮಹತ್ಯೆ ಶರಣಾಗಿದ್ದಾರೆ ಎಂದು ಸರಕಾರದ ಅಂಕಿ ಅಂಶಗಳು ತಿಳಿಸಿವೆ.

Join Whatsapp