ಸಂತ್ರಸ್ತೆಯನ್ನು ವಿವಾಹವಾಗಲು ಅನುಮತಿ ಕೋರಿ ಸುಪ್ರೀಂ ಮೊರೆ ಹೋದ ಅತ್ಯಾಚಾರಿ

Prasthutha|

ಕೊಚ್ಚಿನ್ , ಜುಲೈ 31 : ಕೇರಳದಲ್ಲಿ ನಡೆದ ಅಮಾನವೀಯ ಅತ್ಯಾಚಾರ ಪ್ರಕರಣದ ಅಪರಾಧಿ ಮಾಜಿ ಕ್ಯಾಥೋಲಿಕ್ ಪಾದ್ರಿ ರಾಬಿನ್ ವಡಕ್ಕುಚೇರಿ ಅತ್ಯಾಚಾರ ಸಂತ್ರಸ್ತೆಯನ್ನು ಮದುವೆಯಾಗಲು ಅನುಮತಿ ಕೋರಿ ಶನಿವಾರ ಸುಪ್ರೀಮ್ ಕೋರ್ಟ್ ಅರ್ಜಿ ಸಲ್ಲಿಸಿದ್ದಾರೆ. ಸೋಮವಾರ ಸುಪ್ರೀಂ ಕೋರ್ಟ್ ಈ ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳಲಿದೆ.

- Advertisement -

ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರವೆಸಗಿ ಗರ್ಭಧಾರಣೆಗೆ ಕಾರಣವಾಗಿದ್ದ ಆರೋಪದ ಹಿನ್ನೆಲೆಯಲ್ಲಿ 2019 ರ ಫೆಬ್ರವರಿಯಲ್ಲಿ ನ್ಯಾಯಾಲಯವು ರಾಬಿನ್ ವಡುಂಚೇರಿ ಎಂಬಾತನಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿತು. ಈ ಹಿನ್ನೆಲೆಯಲ್ಲಿ ಚರ್ಚ್ ಅವರನ್ನು ಪಾದ್ರಿ ಸ್ಥಾನದಿಂದ ವಜಾಗೊಳಿಸಿತ್ತು.

ಕ್ಯಾಥೋಲಿಕ್ ಕುಟುಂಬಕ್ಕೆ ಸೇರಿದ ಅಪ್ರಾಪ್ತ ಬಾಲಕಿ ಪ್ಯಾರಿಷ್ ಎಂಬ ಪ್ರದೇಶದ ನಿವಾಸಿಯಾಗಿದ್ದಳು. ಮಾತ್ರವಲ್ಲದೇ ಇದೇ ಪ್ರದೇಶದಲ್ಲಿ ಪಾದ್ರಿಯಾಗಿ ಕೆಲಸ ನಿರ್ವಹಿಸುತಿದ್ದ ವಡಕ್ಕುಂಚೆರಿಲ್ ಅವರು 2016 ರಲ್ಲಿ 10 ನೇ ತರಗತಿಯ ಪರೀಕ್ಷೆ ಬರೆಯುವ ನಿಟ್ಟಿನಲ್ಲಿ ಡಾಟಾವನ್ನು ತೆಗೆಯಲು ಕಾನ್ವೆಂಟ್ ಆಗಮಿಸಿದ ಬಾಲಕಿಯನ್ನು ಯಾರೂ ಇಲ್ಲದ ಸಮಯ ನೋಡಿ ಬೆಡ್ ರೂಮ್ ಕೂಡಿಹಾಕಿ ಅತ್ಯಾಚಾರ ಎಸಗಿದ್ದನು. ಮಾತ್ರವಲ್ಲದೇ ಈ ಘಟನೆಯನ್ನು ಯಾರೊಂದಿಗೂ ಹೇಳದಂತೆ ಬಾಲಕಿಗೆ ಬೆದರಿಕೆ ಹಾಕಿದ್ದ. ಆದರೆ ಬಾಲಕಿ ಗರ್ಭದರಿಸಿದ ಹಿನ್ನೆಲೆಯಲ್ಲಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು.

- Advertisement -

ಸಾಕಷ್ಟು ವಿವಾದಕ್ಕೆ ಕಾರಣವಾಗಿದ್ದ ಈ ಪ್ರಕರಣವನ್ನು ಮುಚ್ಚಿಹಾಕಲು ರಾಬಿನ್ ವಡುಂಕ್ಕುಚೇರಿ ಸತತ ಪ್ರಯತ್ನದ ಹೊರತಾಗಿಯೂ ಫೆಬ್ರವರಿ 2017 ರಲ್ಲಿ ಕೊಚ್ಚಿಯಿಂದ ಬಂಧಿಸಲಾಗಿತ್ತು.



Join Whatsapp