ಮಾಲಿ ಅಧ್ಯಕ್ಷರ ಹತ್ಯೆಗೆ ಯತ್ನ| ಪೊಲೀಸ್ ವಶದಲ್ಲಿದ್ದ ಆರೋಪಿಯ ಕಸ್ಟಡಿ ಸಾವು

Prasthutha|

ಮಾಲಿ ಜುಲೈ 26 : ಕಳೆದ ವಾರ ಮಾಲಿಯ ಹಂಗಾಮಿ ಅಧ್ಯಕ್ಷ ಆಶಿಮಿ ಗೊಯಿಟಾ ಅವರನ್ನು ಇರಿಯಲು ಯತ್ನಿಸಿದ ಆರೋಪಿಯೊಬ್ಬ ಆಸ್ಪತ್ರೆಯಲ್ಲಿ ಭದ್ರತಾ ಸೇನೆಗಳ ವಶದಲ್ಲಿದ್ದಾಗ ಸಾವನ್ನಪ್ಪಿದ್ದಾರೆ ಎಂದು ಸರ್ಕಾರ ಭಾನುವಾರ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.

- Advertisement -

ಕಳೆದ ವರ್ಷ ಮಾಲಿಯಲ್ಲಿ ನಡೆದ ದಂಗೆಗಳನ್ನು ನಿಭಾಯಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದ ವಿಶೇಷ ಪಡೆಗಳ ಮುಖ್ಯಸ್ಥ ರಾಗಿದ್ದ ಕರ್ನಲ್ ಗೊಯಿಟಾ ಅವರು ಮಂಗಳವಾರ ರಾಜಧಾನಿ ಬಮಾಕೊ ಎಂಬಲ್ಲಿನ ಮಸ್ಜಿದ್ ನಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಗೊಯಿಟಾ ಅವರಿಗೆ ಇರಿಯಲು ಯತ್ನಿಸಿದ್ದ. ಆ ವೇಳೆ ಗೊಯಿಟಾ ಅವರಿಗೆ ಯಾವುದೇ ಗಾಯಗಳಾಗದೆ ದಾಳಿಯಿಂದ ಪಾರಾಗಿದ್ದರು. ತಕ್ಷಣ ಗೊಯಿಟಾ ಅವರನ್ನು ಸುತ್ತುವರಿದ ಭದ್ರತಾ ಪಡೆಗಳು ವ್ಯಕ್ತಿಯನ್ನು ಬಂಧಿಸಿ ಮಿಲಿಟರಿ ವಾಹನದ ಹಿಂಬದಿಗೆ ಎಸೆದಿದ್ದರು.

ಬಂಧಿತ ವ್ಯಕ್ತಿಯನ್ನು ತೀವ್ರ ತನಿಖೆಗೊಳಪಡಿಸಿದಾಗ ತೀವ್ರ ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವ್ಯಕ್ತಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆಂದು ಮೂಲಗಳು ಖಚಿತಪಡಿಸಿದೆ. ಆರೋಪಿಯ ಕಸ್ಟಡಿ ಸಾವಿನ ಕುರಿತು ತನಿಖೆ ಚುರುಕುಗೊಳಿಸಲಾಗಿದೆ.



Join Whatsapp