ಒಮಾನ್ ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಮೃತದೇಹ ನಾಳೆ ತವರಿಗೆ

Prasthutha|

ಮಂಗಳೂರು: ಸೋಶಿಯಲ್ ಫೋರಮ್ ಒಮಾನ್ ಇದರ ಮುಂಚೂಣಿ ನಾಯಕ, ಸಾಮಾಜಿಕ ಕಾರ್ಯಕರ್ತ ಅಬ್ದುಲ್ ಹಮೀದ್ ಪಾಣೆಮಂಗಳೂರು(54) ರವರ ಮೃತದೇಹವು ನಾಳೆ ತವರೂರಾದ ಬಂಟ್ವಾಳ ತಾಲೂಕಿನ ನೆಹರೂ ನಗರಕ್ಕೆ ತಲುಪಲಿದೆ. ಒಮಾನ್ ನ ರೋಯಲ್ ಆಸ್ಪತ್ರೆಯಲ್ಲಿ ಕಳೆದ 21 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಅಬ್ದುಲ್ ಹಮೀದ್ ಅವರು ದಿನಾಂಕ 21-7-2021ರ ರಾತ್ರಿ 11 ಗಂಟೆಯ ವೇಳೆಗೆ ನಿಧನರಾಗಿದ್ದರು. ಮೃತದೇಹವನ್ನು ತವರಿಗೆ ಕಳುಹಿಸಿಕೊಡಬೇಕೆಂದು ಕುಟುಂಬಸ್ಥರು ಕೋರಿಕೆ ಸಲ್ಲಿಸಿದ ಮೇರೆಗೆ ಅದಕ್ಕೆ ಸಂಬಂಧಿಸಿದ ಎಲ್ಲ ದಾಖಲೆ ಪತ್ರಗಳ ಪ್ರಕ್ರಿಯೆಯನ್ನು ಸೋಶಿಯಲ್ ಫೋರಮ್ ಒಮಾನ್ ತಂಡವು ನಿರ್ವಹಿಸಿತ್ತು.

- Advertisement -

ಇಂದು ಮಸ್ಕತ್ ನ ಕೌಲಾ ಆಸ್ಪತ್ರೆಯಲ್ಲಿ ಮೃತರ ಅಂತಿಮ ದರ್ಶನಕ್ಕಾಗಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಪಾರ ಸಂಖ್ಯೆಯಲ್ಲಿ ಅನಿವಾಸಿ ಭಾರತೀಯರು ಅಬ್ದುಲ್ ಹಮೀದ್ ರವರ ಅಂತಿಮ ದರ್ಶನಕ್ಕಾಗಿ ನೆರೆದಿದ್ದರು. ತಡರಾತ್ರಿ 12.25ಕ್ಕೆ ಮಸ್ಕತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ನಾಳೆ (25-7-2021) ಮುಂಜಾನೆ 6 ಗಂಟೆಯ ಹೊತ್ತಿಗೆ ಕೇರಳದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯಲಿದೆ. ಬಳಿಕ ಆಂಬುಲೆನ್ಸ್ ಮೂಲಕ ತವರಿಗೆ ತಲುಪಲಿದೆ.



Join Whatsapp