ನಾಲ್ಕನೇ ಬಾರಿಗೆ ಸಿರಿಯಾ ಅಧ್ಯಕ್ಷರಾಗಿ ಬಶರ್ ಅಸ್ಸಾದ್ ಅಧಿಕಾರ ಸ್ವೀಕಾರ

Prasthutha|

ಡಮಾಸ್ಕಸ್, ಜುಲೈ 17: ಯುದ್ಧ ಬಾಧಿತ ಸಿರಿಯಾದ ಅಧ್ಯಕ್ಷರಾಗಿ ನಾಲ್ಕನೇ ಬಾರಿಗೆ ಪ್ರಚಂಡ ಬಹುಮತದಿಂದ ಜಯಗಳಿಸಿದ ಬಶರ್ ಅಸ್ಸಾರ್ ಸಂವಿಧಾನ ಮತ್ತು ಕುರ್ಆನ್ ನ ಮೇಲೆ ಪ್ರಮಾಣವಚನ ಸ್ವೀಕರಿಸಿದರು.

- Advertisement -

ಈ ಸಂದರ್ಭದಲ್ಲಿ ಸಚಿವರು, ಉಧ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಪತ್ರಕರ್ತರು ಸೇರಿದಂತೆ 600 ಕ್ಕೂ ಹೆಚ್ಚು ಅತಿಥಿಗಳು ಉಪಸ್ಥಿತರಿದ್ದರೆಂದು ಸಂಘಟಕರು ತಿಳಿಸಿದ್ದಾರೆ.
ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಅಂತಾರಾಷ್ಟ್ರೀಯ ಸಮುದಾಯದಿಂದ ಸಾಕಷ್ಟು ವಿಮರ್ಶೆ ಮತ್ತು ಟೀಕೆಗೊಳಗಾಗಿದ್ದ ಹಾಲಿ ಅಧ್ಯಕ್ಷ ಬಶರ್ ಅಸ್ಸಾದ್ ಅವರು ಚುನಾವಣೆಯಲ್ಲಿ ಶೇಕಡಾ 95 ರಷ್ಟು ಮತಗಳನ್ನು ಪಡೆದುಕೊಂಡು ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಸಿರಿಯಾದ ಸಂವಿಧಾನ ಮತ್ತು ತಾಯ್ನಾಡಿನ ನ್ಯಾಯಯುತ ಬೇಡಿಕೆಯ ಬಗ್ಗೆ ಪಾಶ್ಚಿಮಾತ್ಯ ಅಧಿಕಾರಿಗಳ ಘೋಷಣೆಯನ್ನು ಸಿರಿಯಾದ ಜನತೆ ಸೋಲಿಸಿದ್ದಾರೆಂದು ಈ ಸಂದರ್ಭದಲ್ಲಿ ಅಧ್ಯಕ್ಷರು ತಿಳಿಸಿದರು.
ಅಸ್ಸಾದ್ ರವರ ಅಧಿಕಾರದ ಅವಧಿಯಲ್ಲಿ ಅಂತರ್ಯುದ್ಧದಲ್ಲಿ ಅರ್ಧ ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ಕೊಲ್ಲಲಾಗಿದೆ ಲಕ್ಷಾಂತರ ಜನರು ವಲಸೆ ಹೋಗಿದ್ದಾರೆ. ಮಾತ್ರವಲ್ಲ ದೇಶದ ಮೂಲಸೌಕರ್ಯಗಳನ್ನು ಸಂಪೂರ್ಣವಾಗಿ ನಾಶಪಡಿಸಲಾಗಿದೆ.

- Advertisement -

ಮೇ 26 ರ ಚುನಾವಣೆಯ ಮುನ್ನಾ ದಿನದಂದು, ಯುನೈಟೆಡ್ ಸ್ಟೇಟ್ಸ್, ಬ್ರಿಟನ್, ಫ್ರಾನ್ಸ್, ಜರ್ಮನಿ ಮತ್ತು ಇಟಲಿ ಮುಂತಾದ ದೇಶಗಳು, ಈ ಮತದಾನವು “ಮುಕ್ತ ಅಥವಾ ನ್ಯಾಯಯುತವಲ್ಲ” ಎಂದು ಹೇಳಿತ್ತು. ಇದನ್ನು ಬಶರ್ ತಳ್ಳಿಹಾಕಿದ್ದಾರೆ.



Join Whatsapp