ಜರ್ಮನಿಯಲ್ಲಿ ಭೀಕರ ಪ್ರವಾಹ : 90 ಕ್ಕೂ ಹೆಚ್ಚು ಜನ ಬಲಿ

Prasthutha|

ಜರ್ಮನಿ: ಜರ್ಮನಿಯ ನೈರುತ್ಯ ರಾಜ್ಯ ರೈನ್ ಲ್ಯಾಂಡ್- ಪಲಾಟಿನೇಟ್ ನ ಅಹ್ರ್ ವೀಲರ್ ಜಿಲ್ಲೆಯಲ್ಲಿ ಪ್ರವಾಹ ಸಂಭವಿಸಿ, 90 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು 600 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಕೊಬ್ಲೆಂಜ್ ಪೊಲೀಸರು ತಿಳಿಸಿದ್ದಾರೆ.

- Advertisement -

ಶನಿವಾರದ ಹೊತ್ತಿಗೆ 90 ಕ್ಕೂ ಹೆಚ್ಚು ಜನರು ಸತ್ತಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದ್ದು, 618 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಈಗಲೂ ವಿದ್ಯುತ್, ದೂರವಾಣಿ ಹಾಗೂ ರಸ್ತೆ ಸಂಪರ್ಕ ಕೆಟ್ಟ ಹವಾಮಾನದಿಂದಾಗಿ, ಕಡಿತಗೊಂಡಿದೆ, ಈ ಪ್ರದೇಶಕ್ಕೆ ಪ್ರಯಾಣಿಸದಂತೆ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಸೋಮವಾರ ಬರ್ಂಡ್ ಚಂಡಮಾರುತದಿಂದ ಜರ್ಮನಿಯಲ್ಲಿ ಭಾರೀ ಮಳೆಯಾಗಿದ್ದು, ಇತ್ತೀಚಿನ ವರದಿ ಪ್ರಕಾರ 100 ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಬುಂಡೆಸ್ವೆಹ್ರ್ ನ ಪಡೆಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ.



Join Whatsapp