ಕಾವಳಕಟ್ಟೆಯಲ್ಲಿ ಸಾರ್ವಜನಿಕ ಕೋವಿಡ್‌ ಪರೀಕ್ಷೆ

Prasthutha|

ಕಾವಳಕಟ್ಟೆ: ಕಾವಳಮುಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಲಂಗಾಲ್ ಎಂಬಲ್ಲಿ ಪಂಚಾಯತ್ ಸದಸ್ಯೆಯರ ನೇತೃತ್ವದಲ್ಲಿ ಸಾರ್ವಜನಿಕ ಕೋವಿಡ್ ಪರೀಕ್ಷೆ ನಡೆಯಿತು.

- Advertisement -

ಕೊರೋನಾ ಮುಕ್ತ ಗ್ರಾಮವನ್ನಾಗಿ ಮಾಡಲು ಶ್ರಮವಹಿಸುತ್ತಿರುವ ಕಾವಳಮುಡೂರು ಗ್ರಾಮ ಪಂಚಾಯತ್ ಸದಸ್ಯೆರಾದ
ಶೈನಾಝ್ ಎನ್ ಸಿ ರೋಡ್ ಹಾಗೂ ಸಫಾ ಸಲ್ಮಾ ಕಾವಳಕಟ್ಟೆ ‌‌‌‌ ಇವರು ಕೋವಿಡ್ ಪರೀಕ್ಷೆ ಮಾಡಿಸುವ ಮೂಲಕ ಸಾರ್ವಜನಿಕ ಕೋವಿಡ್‌ ಪರೀಕ್ಷೆಗೆ ಚಾಲನೆ ನೀಡಿದರು. ಸರಿಸುಮಾರು 102 ಮಂದಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡರು.


ಈ ಸಂದರ್ಭದಲ್ಲಿ ಲ್ಯಾಬ್ ಟೆಕ್ನಾಲಜಿ ಪುಂಜಾಲಕಟ್ಟೆಯ ಸಿಬ್ಬಂದಿ ಹರಿಣಾಕ್ಷಿ, ಪ್ರಾಥಮಿಕ ಆರೋಗ್ಯ ಕೇಂದ್ರ ಪುಂಜಾಲಕಟ್ಟೆಯ ನರ್ಸ್ ಅಫ್ರೀನ ಮತ್ತು ಕೊರೋನ ವಾರಿಯರ್ ಶಾರದಾ ಮುಂತಾದವರು ಉಪಸ್ಥಿತರಿದ್ದರು.

Join Whatsapp