ಯಾವುದೇ ಚಾರ್ಜ್ ಶೀಟ್ ಸಲ್ಲಿಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರನ್ನು ಜೈಲಿನಲ್ಲಿರಿಸಲಾಗಿದೆಯೇ?… ವಾಸ್ತವ ಏನು?

Prasthutha|

ಹೊಸದಿಲ್ಲಿ: ಭಾರತದಲ್ಲಿರುವ ಅಸ್ತಿತ್ವದಲ್ಲಿರುವ ಕ್ರೂರ ಯುಎಪಿಎ ಕಾನೂನಿನಡಿಯಲ್ಲಿ ವಿಚಾರಣಾಧೀನ ಖೈದಿಯಾಗಿ ಬಂಧಿಸಲ್ಪಟ್ಟ ಸಾಮಾಜಿಕ ಕಾರ್ಯಕರ್ತ ಮತ್ತು ಫಾದರ್ ಸ್ಟ್ಯಾನ್ ಸ್ವಾಮಿ ಅವರು ನ್ಯಾಯಾಲಯದ ವಿಚಾರಣೆಗೆ ಕಾಯುತ್ತಿದ್ದ ವೇಳೆ ಜುಲೈ 5. 2021 ರಂದು ಜೈಲಿನಲ್ಲಿಯೇ ಸಾವನ್ನಪ್ಪಿರುವುದು ಎಲ್ಲರಿಗೂ ಗೊತ್ತಿರುವ ವಿಷಯ.

- Advertisement -

 84 ವರ್ಷದ ಸ್ಟ್ಯಾನ್ ಸ್ವಾಮಿ ಅವರನ್ನು ನಿಷೇಧಿತ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಗೆ ಸಂಬಂಧ ಮತ್ತು 2018 ರಲ್ಲಿ ಭೀಮಾ ಕೋರೆಗಾಂವ್ ನಲ್ಲಿ ಹಿಂಸಾಚಾರವನ್ನು ಪ್ರಚೋದಿಸಿದ ಆರೋಪದ ಮೇಲೆ ಬಂಧಿಸಲಾಯಿತು. ಸ್ಟ್ಯಾನ್ ಅವರ ಸಾವು, ಮೋದಿ ಸರ್ಕಾರ ಮತ್ತು ಭಾರತೀಯ ನ್ಯಾಯಾಂಗ ವ್ಯವಸ್ಥೆಯಲ್ಲಿನ ಮಾನವ ಹಕ್ಕುಗಳ ಉಲ್ಲಂಘನೆಗೆ ಸ್ಪಷ್ಟ ನಿದರ್ಶನವಾಗಿದೆ. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿದ್ದ ಸ್ಟಾನ್ ಸ್ವಾಮಿ ಅವರಿಗೆ ನ್ಯಾಯಾಲಯವು ಕಳೆದ ಏಳು ತಿಂಗಳಲ್ಲಿ ಅನೇಕ ಬಾರಿ ಜಾಮೀನು ನಿರಾಕರಿಸಿದೆ. ವಿಶ್ವಸಂಸ್ಥೆ ಸೇರಿದಂತೆ ಅಂತಾರಾಷ್ಟ್ರೀಯ ಸಮುದಾಯ ಸ್ಟ್ಯಾನ್ ಸ್ವಾಮಿಯವರ ಕಸ್ಟಡಿ ಮರಣವನ್ನು ಒಟ್ಟಾಗಿ ಖಂಡಿಸಿದೆ.

ಈ ಮಧ್ಯೆ ಭಾರತದಲ್ಲಿನ ಬಲಪಂಥೀಯ ವಕೀಲರ ಒಂದು ವಿಭಾಗವು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದು, ಸ್ಟ್ಯಾನ್ ಸ್ವಾಮಿ ಯವರ ಕುರಿತು ಧ್ವನಿಯೆತ್ತುವವರು ಭಯೋತ್ಪಾದನೆ ಆರೋಪದ ಮೇಲೆ ಬಂಧನದಲ್ಲಿದ್ದು, ಸದ್ಯ ಜಾಮೀನಿನ ಮೇಲೆ ಹೊರಗಿರುವ ಸಂಸದೆ ಪ್ರಜ್ಞಾ ಠಾಕೂರ್ ಮತ್ತು ಲೆಫ್ಟಿನೆಂಟ್ ಕರ್ನಲ್ ಪ್ರಸಾದ್ ಶ್ರೀಕಾಂತ್ ಪುರೋಹಿತ್ ಅವರ ಬಗ್ಗೆ ಮೌನವಾಗಿದ್ದಾರೆ. ಇವರಿಬ್ಬರನ್ನೂ ಚಾರ್ಜ್ ಶೀಟ್ ಸಲ್ಲಿಸದೆ ಜೈಲಿನಲ್ಲಿರಿಸಲಾಗಿದೆ ಎಂದು ಅಂಕಣಕಾರ ಅಭಿಜಿತ್ ಅಯ್ಯರ್ ಮಿತ್ರ ಅವರು ತನ್ನ ಟ್ವೀಟ್ ನಲ್ಲಿ ಆರೋಪಿಸಿದ್ದಾರೆ.

- Advertisement -

ಸೆಪ್ಟೆಂಬರ್ 29, 2008 ರಂದು, ಮಹಾರಾಷ್ಟ್ರದ ಮಾಲೆಗಾಂವ್ ನಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) 2008 ರ ಅಕ್ಟೋಬರ್ನಲ್ಲಿ ಪ್ರಜ್ಞಾ ಠಾಕೂರ್ ಅವರನ್ನು ಪ್ರಮುಖ ಆರೋಪಿಗಳಲ್ಲಿ ಒಬ್ಬಳಾಗಿ ಬಂಧಿಸಿತು. ಎಟಿಎಸ್ ತನ್ನನ್ನು ಅಕ್ಟೋಬರ್ 10, 2008 ರಿಂದ ಅಕ್ಟೋಬರ್ 22, 2008 ರವರೆಗೆ ಅಕ್ರಮ ಬಂಧನದಲ್ಲಿರಿಸಿದೆ ಎಂದು ಠಾಕೂರ್ ಆರೋಪಿಸಿದ್ದರು.

ವಿಚಾರಣಾಧೀನ ಖೈದಿಯಾಗಿ ಜೈಲಿನಲ್ಲಿದ್ದ ಪ್ರಜ್ಞಾಸಿಂಗ್ ಅವರು ಮಾರ್ಚ್ 12 2010 ರಂದು ಭಾರತದ ಸಂವಿಧಾನ ಮತ್ತು ಕ್ರಿಮಿನಲ್ ಪ್ರೊಸೀಜರ್ ಕೋಡ್ (ಸಿಆರ್ ಪಿಸಿ) ಸೆಕ್ಷನ್ 167 (2) ಪ್ರಕಾರ 90 ದಿನಗಳ ವರೆಗೆ ಚಾರ್ಜ್ ಶೀಟ್ ಸಲ್ಲಿಸದಿರುವ ಆಧಾರದ ಮೇಲೆ ತನಗೆ ಡೀಪಾಲ್ಟ್ ಜಾಮೀನು ನೀಡಬೇಕೆಂದು ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸುತ್ತಾರೆ. ಆದರೆ ಬಾಂಬೆ ಹೈ ಕೋರ್ಟ್ ಈ ಅರ್ಜಿಯನ್ನು ತಿರಸ್ಕರಿಸುತ್ತದೆ.

ಈ ಕುರಿತು ಸುಪ್ರೀಂ ಕೋರ್ಟ್ ನ ವಕೀಲರಾದ ವಿವೇಕ್ ಶರ್ಮಾ ಅವರು ಮಾಧ್ಯಮಕ್ಕೆ ಮಾಹಿತಿ ನೀಡಿ, ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ರ ಸೆಕ್ಷನ್ 167 (2) ರ ಅಡಿಯಲ್ಲಿ ಪೊಲೀಸರು ಯಾವುದೇ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡ ನಂತರ ಶಾಸನಬದ್ಧವಾಗಿ ನಿಗದಿತ ಸಮಯದೊಳಗೆ ಚಾರ್ಜ್ ಶೀಟ್ ಸಲ್ಲಿಸುವಲ್ಲಿ ವಿಫಲರಾದಾಗ ಡೀಪಾಲ್ಟ್ ಜಾಮೀನು ನೀಡುವುದು ಅನಿವಾರ್ಯವಾಗಲಿದೆ. ಠಾಕೂರ್ ಪ್ರಕಾರ, 2008 ರ ಅಕ್ಟೋಬರ್ 10 ರಂದು ಆಕೆಯನ್ನು ಬಂಧಿಸಲಾಯಿತು ಮತ್ತು 90 ದಿನಗಳ ಅವಧಿ ಮುಗಿದ ನಂತರ 2009 ರ ಜನವರಿ 20 ರಂದು ಚಾರ್ಜ್ ಶೀಟ್ ಸಲ್ಲಿಸಲಾಯಿತು ಎಂದು ಹೇಳಿದರು. ಈ ಹಿನ್ನೆಲೆಯಲ್ಲಿ ಬಾಂಬೆ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಠಾಕೂರು ಅವರು ಸೆಪ್ಟೆಂಬರ್ 23, 2011 ರಂದು ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದರು. ಆದಾಗ್ಯೂ ಸರ್ವೋಚ್ಚ ನ್ಯಾಯಾಲಯವು 2008 ರ ಅಕ್ಟೋಬರ್ 10 ರಂದು ಬಂಧಿಸಲಾಯಿತು ಎಂಬ ಪೋಲಿಸರು ಸಲ್ಲಿಸಿದ್ದ ಮೇಲ್ಮನವಿ ಅಧಾರದಲ್ಲಿ “ಸಂವಿಧಾನದ 22 (2) ನೇ ವಿಧಿಯನ್ನು ಉಲ್ಲಂಘಿಸಲಾಗಿದೆಯೆಂಬ ನಿಟ್ಟಿನಲ್ಲಿ ಅವರ ಜಾಮಿನು ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿತ್ತು. ವಾಸ್ತವದಲ್ಲಿ ಸತ್ಯಶೋಧನ ವರದಿಯ ಅಧಾರದಲ್ಲಿ ಜನವರಿ 20, 2009 ರಂದು ಎಟಿಎಸ್ ಸಲ್ಲಿಸಿದ ಚಾರ್ಜ್ ಶೀಟ್ 2008 ರ ಅಕ್ಟೋಬರ್ 23 ಎಂದು ಬಂಧಿಸಲ್ಪಟ್ಟ ದಿನಾಂಕವನ್ನು ಸಹ ಪ್ರತಿಬಿಂಬಿಸುತ್ತದೆಯೆಂಬುವುದು ಗಮನಾರ್ಹ.



Join Whatsapp