ಕಾನೂನು ಜಾರಿಯಿಂದ ಜನಸಂಖ್ಯೆ ನಿಯಂತ್ರಿಸಲು ಸಾಧ್ಯವಿಲ್ಲ | ಬಿಜೆಪಿಗೆ ನಿತೀಶ್ ಕುಮಾರ್ ಟಾಂಗ್

Prasthutha|

ಪಾಟ್ನಾ : ಕಾನೂನು ಜಾರಿಯಿಂದ ಜನಸಂಖ್ಯೆ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಜೆಪಿ ಆಡಳಿತದ ರಾಜ್ಯ ಸರ್ಕಾರಗಳಿಗೆ ತಿರುಗೇಟು ನೀಡಿದ್ದಾರೆ. “ರಾಜ್ಯಗಳು ತಮಗೆ ಬೇಕಾದುದನ್ನು ಮಾಡಬಹುದು. ಆದರೆ ಕಾನೂನಿನಿಂದ ಜನಸಂಖ್ಯಾ ನಿಯಂತ್ರಣ ಸಾಧ್ಯವಿಲ್ಲ ಎಂದು ನಾನು ಸ್ಪಷ್ಟವಾಗಿ ನಂಬಿದ್ದೇನೆ. ಚೀನಾ ಅಥವಾ ಇನ್ನಾವುದೇ ರಾಷ್ಟ್ರದ ಉದಾಹರಣೆಯನ್ನು ಇದಕ್ಕಾಗಿ ತೆಗೆದುಕೊಳ್ಳಬಹುದು ಎಂದು “ನಿತೀಶ್ ಕುಮಾರ್ ಹೇಳಿದರು.

- Advertisement -


ಉತ್ತರ ಪ್ರದೇಶ ಮತ್ತು ಅಸ್ಸಾಂ ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕಾಗಿ ಕಾನೂನು ಜಾರಿಗೆ ತರಲು ಮುಂದಾಗುತ್ತಿದ್ದಂತೆ , ಪ್ರಧಾನಿ ನರೇಂದ್ರ ಮೋದಿಯವರ ಬಿಹಾರದ ಸ್ನೇಹಿತ ನಿತೀಶ್ ಕುಮಾರ್ ಮತ್ತೊಮ್ಮೆ ತಮ್ಮ ಭಿನ್ನಾಭಿಪ್ರಾಯವನ್ನು ಬಹಿರಂಗವಾಗಿ ವ್ಯಕ್ತಪಡಿಸಿದ್ದಾರೆ.


ಬಿಹಾರ ಮುಖ್ಯಮಂತ್ರಿ ಪ್ರಕಾರ ಕುಟುಂಬದ ಮಹಿಳೆ ಹೆಚ್ಚು ವಿದ್ಯಾವಂತಳಾದರೆ ಫಲವತ್ತತೆ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಅಂಕಿಅಂಶವು ಒಂದು “ಅಚ್ಚರಿಯ ಸತ್ಯ”. “ಮಹಿಳೆಯರಿಗೆ ಅರಿವು ಮತ್ತು ಶಿಕ್ಷಣ ದೊರೆತಾಗ, ಜನಸಂಖ್ಯೆ ಬೆಳವಣಿಗೆ ದರ ಕುಸಿಯುತ್ತದೆ” ಎಂದು ಅವರು ಹೇಳಿದ್ದಾರೆ. 370ನೇ ವಿಧಿ ರದ್ದು, ಸಿಎಎ-ಎನ್ಆರ್ ಸಿ ವಿಚಾರದಲ್ಲಿ ಸಹ ನಿತೀಶ್ ಇದೇ ಬಗೆಯ ಭಿನ್ನಾಭಿಪ್ರಾಯ ತಾಳಿದ್ದರು.



Join Whatsapp