ಕ್ರಿಕೆಟಿಗ ಯಶ್ಪಾಲ್ ಶರ್ಮಾ ಹೃದಯಾಘಾತದಿಂದ ನಿಧನ

Prasthutha|

ಭಾರತದ ಮಾಜಿ ಕ್ರಿಕೆಟಿಗ ಮತ್ತು 1983 ರ ವಿಶ್ವಕಪ್ ವಿಜೇತ ತಂಡದ ಯಶ್ಪಾಲ್ ಶರ್ಮಾ ಮಂಗಳವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. 1983 ರಲ್ಲಿ ನಡೆದ ಭಾರತದ ವಿಶ್ವಕಪ್ ವಿಜಯೋತ್ಸವದಲ್ಲಿ ಯಶ್ಪಾಲ್ ಕೂಡ ಇದ್ದರು. ಸೆಮಿಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯವನ್ನು ಗೆದ್ದು 60 ಸೇರಿದಂತೆ 34.28 ರ ಸರಾಸರಿಯಲ್ಲಿ 240 ರನ್ ಗಳಿಸಿದ್ದರು.

- Advertisement -

66 ವರ್ಷದ ಮಾಜಿ ಪಂಜಾಬ್ ಕ್ರಿಕೆಟಿಗ ಯಶ್ಪಾಲ್ ಶರ್ಮಾ “ ಪ್ರತಿಭಾನ್ವಿತ ಮಧ್ಯಮ ಕ್ರಮಾಂಕದ ಬ್ಯಾಟ್ಸ್ ಮ್ಯಾನ್ ಆಗಿದ್ದರು. 1979 ರಿಂದ 1983 ರವರೆಗಿನ ವೃತ್ತಿಜೀವನದಲ್ಲಿ, ಯಶ್ಪಾಲ್ ಭಾರತಕ್ಕಾಗಿ 37 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ ಮತ್ತು ಎರಡು ಶತಕ ಮತ್ತು ಒಂಬತ್ತು ಅರ್ಧ ಶತಕಗಳೊಂದಿಗೆ 1606 ರನ್ ಗಳಿಸಿದ್ದರು. ಯಶ್ಪಾಲ್ 1979 ರಲ್ಲಿ ಇಂಗ್ಲೆಂಡ್ ವಿರುದ್ಧ ಚೊಚ್ಚಲ ಪ್ರವೇಶ ಮಾಡಿದ್ದರು. 1972ರಲ್ಲಿ ಶಾಲೆಗಳ ನಡುವೆ ನಡೆದ ಪಂದ್ಯಾಟದಲ್ಲಿ ಪಂಜಾಬ್ ಶಾಲೆಗಳ ಪರವಾಗಿ ಜಮ್ಮು ಮತ್ತು ಕಾಶ್ಮೀರ ಶಾಲೆಗಳ ವಿರುದ್ಧ 260 ಸ್ಕೋರ್ ಮಾಡಿ ಯಶ್ಪಾಲ್ ಮೊದಲ ಬಾರಿಗೆ ಬೆಳಕಿಗೆ ಬಂದರು.

Join Whatsapp