ಮೈಸೂರು : ರಾಜ್ಯದಲ್ಲಿ ಕೊರೋನ ಲಾಕ್ ಡೌನ್ ಅನ್ ಲಾಕ್ ಆದ ಬೆನ್ನಲ್ಲೇ ಚಾಮುಂಡೇಶ್ವರಿ ದರ್ಶನ ಪಡೆದ ಬಿಜೆಪಿ ಶಾಸಕ ಬಸನಗೌಡ ಯತ್ನಾಳ್, ಮತ್ತೆ ನಾಯಕತ್ವ ಬದಲಾವಣೆ ಬಗ್ಗೆ ಮತ್ತೊಮ್ಮೆ ಖಡಕ್ ಆಗಿ ಮಾತನಾಡಿದ್ದಾರೆ.
ಪಕ್ಷ ಉಳಿಯಬೇಕಾದರೆ ಮುಖ್ಯಮಂತ್ರಿ ಬದಲಾಗಲೇಬೇಕು. ಆಗಸ್ಟ್ 15 ಕ್ಕೂ ಮೊದಲೇ ನಾಯಕತ್ವ ಬದಲಾಗಲಿದೆ. ಒಂದು ದಿನ ಮುಂದೆ ಹೋದರೂ ಇವರು 100 ಕೋಟಿ ಲೂಟಿ ಹೊಡೀತಾರೆ. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಈ ನಾಯಕತ್ವ ಬದಲಾಗಬೇಕು ಎಂದು ಸಿಎಂ ಯಡಿಯೂರಪ್ಪ ಮತ್ತು ಪುತ್ರರ ವಿರುದ್ಧ ನೇರವಾಗಿ ಯತ್ನಾಳ್ ವಾಗ್ದಾಳಿ ನಡೆಸಿದ್ದಾರೆ.
ಇನ್ನು, ಸಿಎಂ ಯಡಿಯೂರಪ್ಪ ಪರ ಬ್ಯಾಟಿಂಗ್ ನಡೆಸುತ್ತಿರುವ ಮಠಾಧೀಶರ ಬಗ್ಗೆ ಯತ್ನಾಳ್ ಕಿಡಿ ಕಾರಿದ್ದಾರೆ. ಮಠಾಧಿಪತಿಗಳು ದಕ್ಷಿಣೆ ನೀಡಿದ್ದಾರೆಂದು ರಾಜಕೀಯ ಮಾಡಲು ಬರಬಾರದು. ಧರ್ಮ ಕಾರ್ಯ ಮಾಡಲಿ. ಇದು ನಿಮ್ಮ ಕೆಲಸ ಅಲ್ಲ ಎಂದಿದ್ದಾರೆ.