ಥಾಣೆ: ಮರಣ ಪ್ರಮಾಣ ಪತ್ರ ತೆಗೆದುಕೊಂಡು ಹೋಗಲು ಬದುಕಿದ್ದ ವ್ಯಕ್ತಿಗೇ ಅಧಿಕಾರಿಗಳು ಕರೆ ಮಾಡಿ ಹೇಳಿದ ವಿಚಿತ್ರ ಘಟನೆ ಮಹಾರಾಷ್ಟ್ರದ ಥಾಣೆಯಲ್ಲಿ ವರದಿಯಾಗಿದೆ.
ಥಾಣೆ ಮುನ್ಸಿಪಾಲ್ ಕಾರ್ಪೋರೇಷನ್ ಅಧಿಕಾರಿಯೊಬ್ಬರು ಕರೆ ಮಾಡಿ ನಿಮ್ಮ ಮರಣ ಪ್ರಮಾಣ ಪತ್ರ ಕಚೇರಿಗೆ ಬಂದಿದೆ. ಕೂಡಲೇ ಬಂದು ತೆಗೆದುಕೊಂಡು ಹೋಗಿ ಎಂದು ಹೇಳಿರುವುದಾಗಿ ಚಂದ್ರಶೇಖರ್ ದೇಸಾಯಿ ಆರೋಪ ಮಾಡಿದ್ದಾರೆ.
ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿದ ಉಪ ಕಮಿಷನರ್ ಸಂದೀಪ್ ಮಾಲ್ವಿ, ಇದೊಂದು ತಾಂತ್ರಿಕ ದೋಷವಾಗಿದ್ದು ಈ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಈ ಲಿಸ್ಟ್ನ್ನು ತಯಾರು ಮಾಡಿದ್ದು ನಾವಲ್ಲ. ನಮಗೆ ಈ ಲಿಸ್ಟ್ ಪುಣೆ ಕಚೇರಿಯಿಂದ ಬಂದಿತ್ತು. ತಾಂತ್ರಿಕ ದೋಷದಿಂದಾಗಿ ಈ ವ್ಯಕ್ತಿಯ ಹೆಸರೂ ಸಹ ಮೃತರ ಪಟ್ಟಿಯಲ್ಲಿ ಸೇರಿಕೊಂಡಿದೆ. ಈ ಬಗ್ಗೆ ಪರಿಶೀಲನೆ ನಡೆಸಿ ತಾಂತ್ರಿಕ ದೋಷ ಸರಿಪಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.