ಎರಡು ಮಕ್ಕಳನ್ನು ಹೊಂದಿದವರಿಗೆ ಮಾತ್ರ ಸರ್ಕಾರಿ ಸೌಲಭ್ಯ: ಅಬುಲ್ ಕಲಾಂ ಅಝಾದ್ ಮೊಮ್ಮಗನಿಂದ ಸುಪ್ರೀಂನಲ್ಲಿ ಅರ್ಜಿ!

Prasthutha|

ಹೊಸದಿಲ್ಲಿ: ಸರ್ಕಾರಿ ಉದ್ಯೋಗ, ಮತದಾನ ಮತ್ತು ಸರ್ಕಾರದ ಸವಲತ್ತುಗಳಲ್ಲಿ ಎರಡು ಮಕ್ಕಳನ್ನು ಹೊಂದಿರುವವನ್ನು ಮಾತ್ರ ಪರಿಗಣಿಸಬೇಕು ಎಂದು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಲಾಗಿದೆ.

- Advertisement -

ಜನಸಂಖ್ಯಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿಗಳನ್ನು ಕೋರಿ ಭಾರತದ ಮೊತ್ತ ಮೊದಲ ಶಿಕ್ಷಣ ಸಚಿವ ಮೌಲಾನಾ ಅಬುಲ್ ಕಲಾಂ ಆಝಾದ್ ಅವರ ಮೊಮ್ಮಗ ಫಿರೋಝ್ ಭಕ್ತ್ ಅಹ್ಮದ್ ಅವರು ನ್ಯಾಯಾಲಯಕ್ಕೆ ಅಚ್ಚರಿಯ ಅರ್ಜಿ ಸಲ್ಲಿಸಿದ್ದಾರೆ.

ಜನಸಂಖ್ಯೆಯ ನಿಯಂತ್ರಣದ ಮೂಲಕ ದೇಶದ ಶೇ .50 ರಷ್ಟು ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಅವರು ಅರ್ಜಿಯಲ್ಲಿ ತಿಳಿಸಿದ್ದಾರೆ. ಸರ್ಕಾರಿ ಉದ್ಯೋಗ, ಮತದಾನ ಮತ್ತು ಸರ್ಕಾರದ ಸವಲತ್ತುಗಳಲ್ಲಿ ಎರಡು ಮಕ್ಕಳನ್ನು ಹೊಂದಿರುವವನ್ನು ಮಾತ್ರ ಪರಿಗಣಿಸಬೇಕು ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

- Advertisement -

ಜನಸಂಖ್ಯಾ ನಿಯಂತ್ರಣಕ್ಕೆ ಅಗತ್ಯವಾದ ಕಾನೂನುಗಳನ್ನು ರೂಪಿಸಲು ನ್ಯಾಯಾಲಯವು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಕೋರಿ ಫಿರೋಝ್ ಭಕ್ತ್ ಈ ಅರ್ಜಿ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಅಶುತೋಷ್ ದುಬೆ ಅವರ ಮೂಲಕ ಈ ಅರ್ಜಿ ಸಲ್ಲಿಸಲಾಗಿದೆ.

ಪ್ರತಿ ತಿಂಗಳ ಮೊದಲ ಭಾನುವಾರವನ್ನು ಪೋಲಿಯೊ ದಿನ ಎಂದು ಆಚರಿಸುವುದನ್ನು ಕೈಬಿಟ್ಟು ಆರೋಗ್ಯ ದಿನವೆಂದು ಆಚರಿಸಬೇಕೆಂದು ಈ ಅರ್ಜಿಯಲ್ಲಿ ಕೋರಲಾಗಿದೆ. ಇದರೊಂದಿಗೆ ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ಸದಸ್ಯರಿಗೆ ಜನಸಂಖ್ಯಾ ನಿಯಂತ್ರಣ ಮತ್ತು ಗರ್ಭನಿರೋಧಕ ಔಷಧಿಗಳ ಬಗ್ಗೆ ಅರಿವು ಮೂಡಿಸಬಹುದು ಎಂದು ಅವರು ಅರ್ಜಿಯಲ್ಲಿ ಒತ್ತಾಯಿಸಿದ್ದಾರೆ.

Join Whatsapp