ಇನ್ನು ಮುಂದೆ ಕೇರಳದಿಂದ ಕರ್ನಾಟಕಕ್ಕೆ ಬರುವವರಿಗೆ RTPCR ನೆಗೆಟಿವ್ ವರದಿ ಕಡ್ಡಾಯ

Prasthutha|

ಬೆಂಗಳೂರು : ಕೇರಳದಿಂದ ಕರ್ನಾಟಕಕ್ಕೆ ಬರುವ ಪ್ರಯಾಣಿಕರು 72 ಗಂಟೆಗಳ ಒಳಗೆ RTPCR ಪರೀಕ್ಷೆ ಮಾಡಿದ ನೆಗೆಟಿವ್ ವರದಿ ಹೊಂದಿರುವುದು ಕಡ್ಡಾಯ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಅವರು ಆದೇಶ ಹೊರಡಿಸಿದ್ದಾರೆ.

- Advertisement -

ಈ ಕುರಿತು ಮಾಹಿತಿ ನೀಡಿದ ಅವರು, ಕೇರಳದಿಂದ ಕರ್ನಾಟಕಕ್ಕೆ ವಿಮಾನ, ಬಸ್ಸು, ಟ್ಯಾಕ್ಸಿ ಮತ್ತು ಸ್ವಂತ ವಾಹನಗಳ ಮೂಲ️ಕ ಬರುವ ಪ್ರಯಾಣಿಕರ ಬಳಿ ಕಡ್ಡಾಯವಾಗಿ 72 ಗಂಟೆಗಳ ಹಿಂದೆ ಮಾಡಿಸಿದ RTPCR ನೆಗೆಟಿವ್ ಪರೀಕ್ಷಾ ವರದಿ ಇರಬೇಕು. ಇಲ್ಲದಿದ್ದರೆ, ಕನಿಷ್ಠ ಒಂದು ಡೋಸ್ ಕೋವಿಡ್ ಲ️ಸಿಕೆ ಪಡೆದಿರುವ ಕುರಿತು ಪ್ರಮಾಣ ಪತ್ರವನ್ನಾದರೂ ಹೊಂದಿರಬೇಕು ಎಂದು ಹೇಳಿದ್ದಾರೆ.

ರೈಲ್ವೆ ಪ್ರಾಧಿಕಾರ, ವಿಮಾನಯಾನ ಸಂಸ್ಥೆಯು ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು RTPCR ನೆಗೆಟಿವ್ ಪರೀಕ್ಷಾ ವರದಿ ಅಥವಾ ಕನಿಷ್ಠ ಒಂದು ಡೋಸ್ ಕೋವಿಡ್ ಲ️ಸಿಕೆ ಪಡೆದಿರುವ ಕುರಿತು ಪ್ರಮಾಣ ಪತ್ರ ಹೊಂದಿರುವುದನ್ನು ಖಚಿತಪಡಿಸಬೇಕು ಎಂದು ಸೂಚಿಸಿದ್ದಾರೆ.

- Advertisement -

ಬಸ್‍ಗಳಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳುವ ಮೊದಲೇ RTPCR ನೆಗೆಟಿವ್ ಪರೀಕ್ಷಾ ವರದಿ ಅಥವಾ ಕನಿಷ್ಠ ಒಂದು ಡೋಸ್ ಕೋವಿಡ್ ಲ️ಸಿಕೆ ಪಡೆದಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ಎರಡು ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಈ ನಿಯಮಗಳಿಂದ ವಿನಾಯಿತಿ ನೀಡಲಾಗಿದೆ ಎಂದರು.



Join Whatsapp