ವೆಲ್ಲಿಂಗ್ಟನ್: ಇತ್ತೀಚೆಗೆ ನಡೆದ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬಿಡೆನ್ ವಿರುದ್ಧ ತಾನು ಸೋತಿಲ್ಲ. ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸುವ ಮೂಲಕ ಮತ್ತೊಮ್ಮೆ ವಿವಾದ ಸೃಷ್ಠಿಸಿದ್ದಾರೆ.
ಓಹಿಯೋದಲ್ಲಿ ನಡೆದ ಟ್ರಂಪ್ ಆಯೋಜಿಸಿದ ಬೃಹತ್ ರ್ಯಾಲಿಯಲ್ಲಿ ಅಪಾರ ಅಭಿಮಾನಿಗಳು ಭಾಗವಹಿಸಿದ್ದರು. 2024 ರ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಈ ವೇಳೆ ಟ್ರಂಪ್ ಸುಳಿವು ನೀಡಿದ್ದಾರೆ. ಓಹಿಯೋ ರಾಜ್ಯದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ರಿಪಬ್ಲಿಕನ್ ಪಕ್ಷದ ನಾಯಕ ಮ್ಯಾಕ್ಸ್ ಮಿಲ್ಲರ್ ಅವರನ್ನು ಆಂತರಿಕ ಚುನಾವಣೆಯಲ್ಲಿ ಗೆಲ್ಲಿಸಿ ಪಕ್ಷದ ಎದುರಾಳಿ ಆಂಥೋನಿ ಗೊನ್ಜಾಲೆಜ್ ಅವರಿಗೆ ಈ ಚುನಾವಣೆಯಲ್ಲಿ ಅವಕಾಶ ನೀಡಬೇಡಿ ಎಂದು ರ್ಯಾಲಿಯಲ್ಲಿ ಅವರು ಒತ್ತಾಯಿಸಿದರು.