UAEಯಲ್ಲಿ ಡೆಲ್ಟಾ ಆತಂಕ : ದೇಶದ ಪ್ರತಿ ಮೂವರು ಸೋಂಕಿತರಲ್ಲಿ ಒಬ್ಬರಿಗೆ ರೂಪಾಂತರಿ ವೈರಸ್ ಸೋಂಕು !

Prasthutha|

ಯುನೈಟೆಡ್ ಅರಬ್ ಎಮಿರೇಟ್ಸ್ ನಲ್ಲಿ ದಾಖಲಾಗುವ ಪ್ರತಿ ಮೂರು ಕೋವಿಡ್-19 ಪ್ರಕರಣಗಳಲ್ಲಿ ಒಂದು ಹೆಚ್ಚು ಅಪಾಯಕಾರಿಯಾಗಿರುವ ಡೆಲ್ಟಾ ರೂಪಾಂತರವಾಗಿದೆ ಎಂದು ಸರಕಾರಿ ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಸಾವಿನ ಸಂಖ್ಯೆ ಮತ್ತು ಅಪಾಯಕಾರಿ ರೂಪಾಂತರಗಳ ಹರಡುವಿಕೆ ಹೆಚ್ಚಾಗಿದೆ. ನಿಯಮಗಳನ್ನು ಅನುಸರಿಸದಿರುವುದು ಮತ್ತು ಲಸಿಕೆ ತೆಗೆದುಕೊಳ್ಳಲು ವಿಫಲವಾಗಿರುವುದು ಇದಕ್ಕೆ ಕಾರಣವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಭಾನುವಾರ ನಡೆದ ವಿಶೇಷ ಕೋವಿಡ್-19 ಮಾಹಿತಿ ನೀಡುವ ಸಂದರ್ಭದಲ್ಲಿ ಈ ಅಂಕಿ ಅಂಶವನ್ನು ಬಿಡುಗಡೆ ಮಾಡಲಾಗಿದೆ. ಲಸಿಕೆ ಪಡೆಯದವರಲ್ಲಿ 94% ಸಾವುಗಳು ಸಂಭವಿಸಿವೆ. ಲಸಿಕೆ ಪಡೆದವರಲ್ಲಿ ಈ ಪ್ರಮಾಣ ಗಣನೀಯವಾಗಿ ಕಡಿಮೆ ಎಂದು ಅಂಕಿ ಅಂಶಗಳು ತಿಳಿಸಿದೆ.

ಯುಎಇ ದೇಶದ ಒಟ್ಟು ಜನಸಂಖ್ಯೆಯ 71 ಶೇಕಡಾ ಜನರಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇದು ಲಸಿಕೆ ಪಡೆಯಲು ಅರ್ಹರಾಗಿರುವ ವಿಭಾಗದ 91.9 ಶೇಕಡಾ ಆಗಿದೆ ಎಂದು ದಾಖಲೆಗಳು  ಹೇಳುತ್ತದೆ.

Join Whatsapp