ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರಕ್ಕೆ ಯತ್ನ; ಕೇರಳದ ಆರೆಸ್ಸೆಸ್ ಕಾರ್ಯಕರ್ತನ ಬಂಧನ

Prasthutha|

ಪಾರಶ್ಸಾ: ಆರೆಸ್ಸೆಸ್ ಕಾರ್ಯಕರ್ತ ಪ್ರಮೋದ್ ಎಂಬಾತ ಅಪ್ರಾಪ್ತ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರವೆಸಗಲು ಪ್ರಯತ್ನಿಸಿ ಪೊಲೀಸರ ಅತಿಥಿಯಾಗಿರುವ ಘಟನೆ ಕೇರಳದ ಚೆಂಗಲ್ ವಥ್ಲಂಕರ ಕೋಡಿತ್ತರ ಎಂಬಲ್ಲಿ ನಡೆದಿದೆ.

- Advertisement -


ಮನೆಯ ಹೊರಗೆ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಬಾಲಕಿಯ ಮೇಲೆ ಪ್ರಮೋದ್ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಬಾಲಕಿ ಬೊಬ್ಬೆ ಹಾಕಿದ ಪರಿಣಾಮ ಮನೆ ಮಂದಿ ಓಡಿ ಬಂದಾಗ ಪ್ರಮೋದ್ ಸ್ಥಳದಿಂದ ಪರಾರಿಯಾಗಿದ್ದಾನೆ.
ಬಾಲಕಿಯ ಸಂಬಂಧಿಕರು ದೂರು ನೀಡಿದ ನಂತರ ಪೋಲಿಸರು ಪ್ರಮೋದ್ ನನ್ನು ಬಂಧಿಸಿದ್ದಾರೆ. ಪ್ರಮೋದ್ ಆರ್ ಎಸ್ ಎಸ್ ಕಾರ್ಯಕರ್ತನಾಗಿದ್ದು, ಅಪರಾಧ ಹಿನ್ನೆಲೆ ಹೊಂದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.


ಅಲ್ಲದೆ ಈತ ಈ ಹಿಂದೆಯೂ ಹಲವು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಆರೋಪವೂ ಕೇಳಿ ಬಂದಿದೆ. ಪಾರಶ್ಯಲ ಎಚ್ಎಸ್ಒಇಕೆ ಸೊಲ್ಜಿಮೋನ್, ಸಬ್ ಇನ್ಸ್ ಪೆಕ್ಟರ್ ಶ್ರೀಜಿತ್ ಜನಾರ್ದನ್ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ನಿನ್ನೆಯಷ್ಟೇ ಮತ್ತೋರ್ವ ಆರ್ ಎಸ್ ಎಸ್ ಕಾರ್ಯಕರ್ತ ಮಧ್ಯಪ್ರದೇಶದಲ್ಲಿ ತನ್ನ ಅಪ್ರಾಪ್ತ ಪುತ್ರಿಯ ಮೇಲೆಯೇ ಅತ್ಯಾಚಾರ ಎಸಗಿ ಬಂಧಿತನಾಗಿದ್ದ.

- Advertisement -



Join Whatsapp